ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ-ಲೀಗ್ ಕಿಂಗ್ ಆಗುವರೇ ಪ್ರಿನ್ಸ್‌ ಪಾಲ್ ಸಿಂಗ್?

Last Updated 31 ಜುಲೈ 2020, 19:30 IST
ಅಕ್ಷರ ಗಾತ್ರ

ಕಣಕಣದಲ್ಲೂ ಇತಿಹಾಸದ ಗಂಧ, ರಕ್ತಚರಿತೆಯ ವಿಷಾದವನ್ನು ಒಳಗೊಂಡಿರುವ ಮಣ್ಣು, ಪಂಜಾಬ್‌ನ ಫಿರೋಜ್‌ಪುರ್ ಜಿಲ್ಲೆಯ ಫಿರೋಜ್‌ಪುರ್ ನಗರ. ಸಟ್ಲೆಜ್ ನದಿಯ ನೀರುಂಡು ಬೆಳೆದಿರುವ, ಆರು ಶತಮಾನಗಳಷ್ಟು ಹಳೆಯ ಈ ನಗರದಲ್ಲಿ ಈಗ ಎದ್ದು ಕಾಣುವುದು ಯೋಧರ ಸ್ಮಾರಕಗಳು. ಇಂಥ ವೀರಭೂಮಿಯಿಂದ ಕ್ರೀಡಾಕಣಕ್ಕೆ ಧುಮುಕಿದವರು ಪ್ರಿನ್ಸೆಪಾಲ್ ಸಿಂಗ್.

ಸತ್ನಾಮ್ ಸಿಂಗ್, ಅಮ್ಜೋತ್ ಸಿಂಗ್ ಮತ್ತು ಪಲ್‌ಪ್ರೀತ್ ಸಿಂಗ್ ಅವರ ಸಾಧನೆಯ ಹಾದಿಯಲ್ಲೇ ಸಾಗಿರುವ ಪ್ರಿನ್ಸೆಪಾಲ್ ಭಾರತ ಬ್ಯಾಸ್ಕೆಟ್‌ಬಾಲ್‌ನಲ್ಲಿ ಮತ್ತೊಂದು ಹೆಜ್ಜೆ ಗುರುತು ಮೂಡಿಸಿದ್ದಾರೆ. ಹೌದು ಅಮೆರಿಕದ ಖ್ಯಾತ ನ್ಯಾಷನಲ್ ಬ್ಯಾಸ್ಕೆಟ್‌ಬಾಲ್ ಅಕಾಡೆಮಿಯ (ಎನ್‌ಬಿಎ) ಜಿ–ಲೀಗ್‌ನಲ್ಲಿ ಆಡಲು ಆಯ್ಕೆಯಾಗಿ ಅವರು ಗಮನ ಸೆಳೆದಿದ್ದಾರೆ. ಜಿ–ಲೀಗ್‌ಗೆ ಭಾರತದಿಂದ ಆಯ್ಕೆಯಾಗಿರುವವರೆಲ್ಲರೂ ಪಜಾಬ್‌ನವರು ಎಂಬುದು ಗಮನಾರ್ಹ. ಸತ್ನಾಮ್ ಸಿಂಗ್ ಲುಧಿಯಾನದವರು. ಅಮ್ಜೋತ್ ಸಿಂಗ್ ಚಂಡೀಗಢದವರು ಮತ್ತು ಪಲ್‌ಪ್ರೀತ್ ಸಿಂಗ್ ಮುಕ್ತ್‌ಸರ್ ಸಾಹೀಬ್ ಜಿಲ್ಲೆಯವರು.

19 ವರ್ಷದ ಪ್ರಿನ್ಸೆಪಾಲ್ ಸಿಂಗ್‌ ವಾಲಿಬಾಲ್‌ ಆಡುತ್ತ ಬೆಳೆದವರು. 13ನೇ ವಯಸ್ಸಿನಲ್ಲಿ ವಾಲಿಬಾಲ್ ಅಕಾಡೆಮಿಯೊಂದನ್ನು ಸೇರಿಕೊಳ್ಳಲು ಲುಧಿಯಾನಕ್ಕೆ ತೆರಳಿದ್ದು ಅವರ ಬದಕಿನ ದಿಸೆಯನ್ನೇ ಬದಲಿಸಿತು. ಲುಧಿಯಾನ ಬ್ಯಾಸ್ಕೆಟ್‌ಬಾಲ್ ಅಕಾಡೆಮಿಯ ಕೋಚ್ ಜೈಪಾಲ್ ಸಿಂಗ್ ಅವರು ಪ್ರಿನ್ಸೆಪಾಲ್‌ಗೆ ಬ್ಯಾಸ್ಕೆಟ್‌ಬಾಲ್‌ನ ರುಚಿ ಹತ್ತಿಸಿದರು. ನಂತರದ ಬೆಳವಣಿಗೆ ಕ್ಷಿಪ್ರವಾಗಿತ್ತು. ಈಚೆಗೆ ಎನ್‌ಬಿಎ ಭಾರತದಲ್ಲೂ ಅಕಾಡೆಮಿ ಆರಂಭಿಸಿದ್ದರಿಂದ ಪ್ರಿನ್ಸೆಪಾಲ್‌ಗೆ ಅನುಕೂಲವಾಯಿತು. ಅಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದರಿಂದ ಆಸ್ಟ್ರೇಲಿಯಾದ ಕ್ಯಾನ್‌ಬೆರಾದಲ್ಲಿರುವ ಎನ್‌ಬಿಎ ಜಾಗತಿಕ ಅಕಾಡೆಮಿಗೆ ಬುಲಾವ್ ಬಂತು. ಅಲ್ಲಿಯೂ ಮಿಂಚಿದ್ದರಿಂದ ಜಿ–ಲೀಗ್‌ನ ಬಾಗಿಲು ತೆರೆಯಿತು.

ಈ ಹಿಂದೆ ಡಿ–ಲೀಗ್ ಆಗಿದ್ದ ಜಿ–ಲೀಗ್‌ ಎನ್‌ಬಿಎಗೆ ನೀಡಿರುವ ಕಾಣಿಕೆ ಕಡಿಮೆಯೇನಲ್ಲ. ಎನ್‌ಬಿಎಯ ಪ್ರಮುಖ ಆಟಗಾರರ ಪೈಕಿ ಬಹುತೇಕರು ಜಿ–ಲೀಗ್‌ನಲ್ಲಿ ಬೆಳೆದವರೇ. ಹೀಗಾಗಿ ಪ್ರಿನ್ಸೆಪಾಲ್ ಸಿಂಗ್‌ ಮೇಲೆಯೂ ಭರವಸೆ ಹೆಚ್ಚಿದೆ. ಈ ಬಾರಿ ಆಯ್ಕೆಯಾದ 21 ಮಂದಿ ಪೈಕಿ ಭಾರತದ ಈ ಆಟಗಾರನ ಭವಿಷ್ಯ ಏನಾಗುತ್ತದೆ ಎಂಬುದು ಮುಂದಿರುವ ಕುತೂಹಲ.

‘ಅರ್ಪಣಾ ಭಾವದಿಂದ ಪರಿಪೂರ್ಣವಾಗಿ ನನ್ನನ್ನು ತೊಡಗಿಸಿಕೊಂಡು ಸಾಮರ್ಥ್ಯ ಪ್ರದರ್ಶಿಸಲಿದ್ದೇನೆ. ಎದೆಗಾರಿಕೆಯಿಂದ ಆಡಬೇಕು. ಶೂಟ್‌ಗಳು ನಿಖರವಾಗಬೇಕು. ಎಲ್ಲವೂ ಅಂದುಕೊಂಡಂತೆ ಆದರೆ ಎರಡು ವರ್ಷಗಳಲ್ಲಿ ಮಹತ್ತರ ಸಾಧನೆ ಆಗಲಿದೆ’ ಎಂಬುದು 6‘10‘‘ ಎತ್ತರದ ಈ ಆಟಗಾರನ ಭರವಸೆಯ ನುಡಿಗಳು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT