ಬೆಂಗಳೂರು: ಎರಡನೇ ಶ್ರೇಯಾಂಕದ ಆಟಗಾರ್ತಿ ಸೃಷ್ಟಿ ಕಿರಣ್ ಮತ್ತು ತನು ವಿಶ್ವಾಸ್ ಅವರು ರಾಜ್ಯ ಟೆನಿಸ್ ಸಂಸ್ಥೆ ಆಶ್ರಯದಲ್ಲಿ ನಡೆಯತ್ತಿರುವ 12 ವರ್ಷದೊಳಗಿನವರ ತತ್ವಂ ಜೂನಿಯರ್ ಸರ್ಕೀಟ್ ಎಐಟಿಎ ಟೂರ್ನಿಯ ಬಾಲಕಿಯರ ವಿಭಾಗದ ಡಬಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡರು.

ಫೈನಲ್‌ನಲ್ಲಿ ಸೃಷ್ಟಿ ಮತ್ತು ತನು ಜೋಡಿ 6–4, 6–0ಯಿಂದ ಪೂಜಾ ನಾಗರಾಜ್ ಮತ್ತು ದೇಶ್ನಾ ಭಟ್ಟಾಚಾರ್ಯ ವಿರುದ್ಧ ಗೆಲುವು ಸಾಧಿಸಿದರು. ತಮಿಳುನಾಡಿನ ಮೀರ್ ಫಜಲ್ ಅಲಿ ಮತ್ತು ಕರ್ನಾಟಕದ ಪ್ರಕಾಶ್ ಶರಣ್ 6–1, 6–1ರಲ್ಲಿ ಅನಿರುದ್ಧ ಪಳನಿಸಾಮಿ ಮತ್ತು ಋತಿಕ್ ಜಯಂತ್ ವಿರುದ್ಧ ಜಯ ಗಳಿಸಿ ಬಾಲಕರ ವಿಭಾಗದ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಗಗನ ಮೋಹನ್ ಫೈನಲ್‌ಗೆ

ಸ್ಪೋರ್ಟಲ್ ಟಾಪ್‌ಸ್ಪಿನ್ ಎಐಟಿಎ 18 ವರ್ಷದೊಳಗಿನವರ ಟೂರ್ನಿಯ ಬಾಲಕಿಯರ ವಿಭಾಗದಲ್ಲಿ ಗಗನ ಮೋಹನ್ ಕುಮಾರ್ ಫೈನಲ್ ಪ್ರವೇಶಿಸಿದರು. ಸೆಮಿಫೈನಲ್‌ನಲ್ಲಿ ಅವರು ಎಸ್.ಪ್ರೇಶಾ ವಿರುದ್ಧ 6-7 (6-8), 6-1, 6-1ರಲ್ಲಿ ಜಯ ಗಳಿಸಿದರು. ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಅವರು ಡೆನಿಕಾ ನಿರ್ಮಲ್ ವಿರುದ್ಧ ಸೆಣಸುವರು. ಡೆನಿಕಾ6-5, 6-0ರಲ್ಲಿ ನಿಧಿ ಬುವಿಲಾ ಎದುರು ಜಯ ಗಳಿಸಿದರು.

ಬಾಲಕರ ವಿಭಾಗದ ಫೈನಲ್‌ನಲ್ಲಿ ಜೇಸನ್ ಮಿಖಾಯಲ್ ಡೇವಿಡ್ ಮತ್ತು ರಿಷಿ ವರ್ಧನ್ ಮುಖಾಮುಖಿಯಾಗುವರು. ಸೆಮಿಫೈನಲ್‌ನಲ್ಲಿ ಜೇಸನ್ 7-5, 6-3ರಲ್ಲಿ ಕೃಶ್ ಅಜಯ್ ತ್ಯಾಗಿ ವಿರುದ್ಧ ಮತ್ತು ರಿಷಿ7-6, 6-2ರಲ್ಲಿ ವೈಭವ್ ಕೃಷ್ಣ ಎದುರು ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.