ಮಡಿಕೇರಿ: ಅಂತರರಾಷ್ಟ್ರೀಯ ಹಾಕಿಪಟು ಸಣ್ಣುವಂಡ ಕೆ. ಉತ್ತಪ್ಪ ಅವರು ಸಂಜನಾ ಅವರೊಂದಿಗೆ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಿರಾಜಪೇಟೆ ತಾಲ್ಲೂಕಿನ ಬಾಳಾಜಿ ಗ್ರಾಮದ ಯೆಲ್ಲೋ ಬ್ಯಾಂಬೂ ರೆಸಾರ್ಟ್ನಲ್ಲಿ ಭಾನುವಾರ ರಾತ್ರಿ ಕೊಡವ ಸಂಪ್ರದಾಯದಂತೆ ದಂಪತಿ ಮುಹೂರ್ತ ನೆರವೇರಿತು.

ಕೋವಿಡ್–19 ಕಾರಣದಿಂದ ಸರಳವಾಗಿ ನಡೆದ ಸಮಾರಂಭದಲ್ಲಿ ಕುಟುಂಬಸ್ಥರು, ಆಪ್ತರಷ್ಟೇ ಪಾಲ್ಗೊಂಡಿದ್ದರು. ಇವರ ನಿಶ್ಚಿತಾರ್ಥ ಶನಿವಾರ ನೆರವೇರಿತ್ತು.

ಬೊಳ್ಳರಿಮಾಡ್ ಗ್ರಾಮದ ಪುಟ್ಟಿಚಂಡ ಉತ್ತಪ್ಪ ಹಾಗೂ ಲೀಲಾ ದಂಪತಿ ಪುತ್ರಿ ಸಂಜನಾ. ಎಸ್.ಕೆ.ಉತ್ತಪ್ಪ ಅವರ ತಂದೆ ದೇವರಪುರ ಗ್ರಾಮದ ಸಣ್ಣುವಂಡ ಕುಶಾಲಪ್ಪ ಹಾಗೂ ತಾಯಿ ನೀರಜಾ ಕುಶಾಲಪ್ಪ ಹಾಜರಿದ್ದರು.

ಉತ್ತಪ್ಪ ಅವರು 2012ರ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಅಂತರರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ಇದುವರೆಗೂ 164 ಅಂತರರಾಷ್ಟ್ರೀಯ ಪಂದ್ಯವಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.