ನವದೆಹಲಿ: ಭಾರತದ ಪಿಸ್ತೂಲ್ ಶೂಟರ್‌ಗಳು ಏಷ್ಯನ್ ಏರ್‌ಗನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಬೇಟೆ ಮುಂದುವರಿಸಿದ್ದಾರೆ.

ಕೊರಿಯಾದ ಡೇಗುನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಸ್ಪರ್ಧೆಯಲ್ಲಿದ್ದ ಎಲ್ಲ ನಾಲ್ಕೂ ಚಿನ್ನಗಳೂ ಭಾರತದ ಪಾಲಾದವು. ಸದ್ಯ ತಂಡವು ಗೆದ್ದ ಪದಕಗಳ ಸಂಖ್ಯೆ 21ಕ್ಕೇರಿದೆ.

ಮಹಿಳೆಯರ 10 ಮೀಟರ್ಸ್ ಏರ್ ಪಿಸ್ತೂಲ್‌ನಲ್ಲಿ ಭಾರತದ ರಿಧಮ್ ಸಂಗ್ವಾನ್ 16–8ರಿಂದ ಭಾರತದವರೇ ಆದ ಪಲಕ್ ಎದುರು ಗೆದ್ದು ಅಗ್ರಸ್ಥಾನ ಗಳಿಸಿದರು. ಇದೇ ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ಮನು ಭಾಕರ್ 17–15ರಿಂದ ಈಶಾ ಸಿಂಗ್ ಅವರಿಗೆ ಸೋಲಿಸಿ ಸ್ವರ್ಣ ಪದಕಕ್ಕೆ ಮುತ್ತಿಟ್ಟರು.

ಪುರುಷರ 10 ಮೀ. ಏರ್ ಪಿಸ್ತೂಲ್‌ನಲ್ಲಿ ಶಿವ ನರ್ವಾಲ್, ನವೀನ್ ಮತ್ತು ವಿಜಯ್‌ವೀರ್ ಸಿಂಧು ಅವರನ್ನೊಳಗೊಂಡ ತಂಡ ಚಿನ್ನ ತನ್ನದಾಗಿಸಿಕೊಂಡಿತು. ಫೈನಲ್‌ನಲ್ಲಿ ಇವರು 16–14ರಿಂದ ಕೊರಿಯಾ ಶೂಟರ್‌ಗಳಿಗೆ ಸೋಲುಣಿಸಿದರು. ಇದೇ ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ಸಾಗರ್ ಡಾಂಗಿ, ಸಾಮ್ರಾಟ್ ರಾಣಾ ಮತ್ತು ವರುಣ್ ತೋಮರ್ 16–2ರಿಂದ ಉಜ್ಬೆಕಿಸ್ತಾನದ ಎದುರು ಗೆದ್ದು ಸ್ವರ್ಣ ಪದಕ ಒಲಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.