ನವದೆಹಲಿ: ಬಾಕ್ಸಿಂಗ್ ಕ್ರೀಡೆಯಲ್ಲಿ ಮೊದಲ ಬಾರಿ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕೋಚ್ ಓ.ಪಿ. ಭಾರದ್ವಾಜ್ (82) ದೀರ್ಘಕಾಲದ ಅನಾರೋಗ್ಯ ಹಾಗೂ ವಯೋಸಹಜ ಕಾಯಿಲೆಗಳಿಂದಾಗಿಶುಕ್ರವಾರ ನಿಧನರಾದರು. ಹತ್ತು ದಿನಗಳ ಹಿಂದಷ್ಟೇ ಅವರ ಪತ್ನಿ ಸಂತೋಷಿ ತೀರಿಕೊಂಡಿದ್ದರು.

1985ರಲ್ಲಿ ಮೊದಲ ಬಾರಿ ದ್ರೋಣಾಚಾರ್ಯ ಪ್ರಶಸ್ತಿಯನ್ನು ನೀಡಲಾಗಿತ್ತು. ಈ ಸಂದರ್ಭದಲ್ಲಿ ಬಾಲಚಂದ್ರ ಭಾಸ್ಕರ್ ಭಾಗವತ್ (ಕುಸ್ತಿ), ಓ.ಎಂ.ನಂಬಿಯಾರ್ (ಅಥ್ಲೆಟಿಕ್ಸ್) ಜೊತೆಗೆ ಭಾರದ್ವಾಜ್ ಅವರಿಗೂ ಪುರಸ್ಕಾರ ಸಂದಿತ್ತು.

‘ಬಹಳ ದಿನಗಳಿಂದ ಅವರ ಆರೋಗ್ಯ ಚೆನ್ನಾಗಿರಲಿಲ್ಲ. ಹೀಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪತ್ನಿಯ ಅಗಲಿಕೆ ಹಾಗೂ ವಯೋಸಹಜ ಕಾಯಿಲೆಗಳು ಅವರನ್ನು ಬಾಧಿಸಿದ್ದವು‘ ಎಂದು ಭಾರದ್ವಾಜ್ ಅವರ ಕುಟುಂಬದ ಆಪ್ತ ಟಿ.ಎಲ್.ಗುಪ್ತಾ ತಿಳಿಸಿದ್ದಾರೆ.

1968–1989ರ ಅವಧಿಯಲ್ಲಿ ಭಾರದ್ವಾಜ್ ಅವರು ರಾಷ್ಟ್ರೀಯ ತಂಡಕ್ಕೆ ತರಬೇತುದಾರರಾಗಿದ್ದರು. ಆಯ್ಕೆ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಹಲವು ಬಾಕ್ಸರ್ಗಳು ಏಷ್ಯನ್, ಕಾಮನ್ವೆಲ್ತ್ ಮತ್ತು ದಕ್ಷಿಣ ಏಷ್ಯಾ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಪಟಿಯಾಲದ ನ್ಯಾಷನಲ್ ಸ್ಪೋರ್ಟ್ಸ್ ಇನ್ಸ್ಟಿಟ್ಯೂಷನ್ನಲ್ಲಿ (ಎನ್ಐಸ್) ಬಾಕ್ಸಿಂಗ್ ಡಿಪ್ಲೊಮಾ ಕೋಚಿಂಗ್ ಕೋರ್ಸ್ ನಡೆಸಿಕೊಟ್ಟ ಮೊದಲಿಗರು ಭಾರದ್ವಾಜ್. ಎನ್ಐಎಸ್ನಿಂದ ನಿವೃತ್ತಿ ಪಡೆದ ಬಳಿಕ ವೀಕ್ಷಕ ವಿವರಣೆಕಾರಗಿ ಕಾರ್ಯನಿರ್ವಹಿಸಿದ್ದ ಅವರು, ದೆಹಲಿಯಲ್ಲಿ ಸ್ವಂತ ಜಿಮ್ ಕೇಂದ್ರವನ್ನು ಹೊಂದಿದ್ದರು.

2008ರಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೂ ಎರಡು ತಿಂಗಳ ಅವಧಿಗೆ ಬಾಕ್ಸಿಂಗ್ನ ಕೆಲವು ತಂತ್ರಗಳನ್ನು ಹೇಳಿಕೊಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.