ಮ್ಯಾಡ್ರಿಡ್: ಎರಡು ಪೆನಾಲ್ಟಿ ಕಾರ್ನರ್ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಿದ ಸಂಜಯ್, ಭಾರತದ ಕಿರಿಯರ ಹಾಕಿ ತಂಡಕ್ಕೆ 4–2ರ ಜಯ ತಂದುಕೊಟ್ಟರು. ಭಾರತ, ಎಂಟು ರಾಷ್ಟ್ರಗಳ 21 ವಯಸ್ಸಿನೊಳಗಿನವರ ಆಹ್ವಾನಿತ ಟೂರ್ನಿಯಲ್ಲಿ ಅಸ್ಟ್ರಿಯಾ ತಂಡವನ್ನು ಮಣಿಸಿತು.

ಪ್ರಥಮ ಕ್ವಾರ್ಟರ್‌ನ ಅಂತ್ಯಕ್ಕೆ ಭಾರತಕ್ಕೆ ಮೊದಲ ಪೆನಾಲ್ಟಿ ಕಾರ್ನರ್ ಅವಕಾಶ ಒದಗಿತು. ಸಂಜಯ್ ಭಾರತದ ಮುನ್ನಡೆಗೆ ಕಾರಣವಾದರು.

23ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕವೇ ಮತ್ತೊಂದು ಗೋಲು ದಾಖಲಿಸಿದ ಸಂಜಯ್ ಮುನ್ನಡೆ ಹೆಚ್ಚಿಸಿದರು. ಒಲಿವರ್ ಕೆರ್ನ್ 34ನೇ ನಿಮಿಷದಲ್ಲಿ ಅಸ್ಟ್ರಿಯಾ ತಂಡದ ಪರ ಮೊದಲ ಗೋಲು ಗಳಿಸಿದರು. ಒಂದು ನಿಮಿಷದೊಳಗೆ ರಾಹುಲ್ ರಾಜ್‌ಭರ್ ಗೋಲು ದಾಖಲಿಸಿ ಭಾರತದ 3–1ರ ಮುನ್ನಡೆಗೆ ಕಾರಣವಾದರು.

49ನೇ ನಿಮಿಷದಲ್ಲಿ ತಂಡದ ಫಿಲಿಪ್ ಶಿಪ್ಪನ್ ಯಶಸ್ವಿಯಾದರು. ತಿರುಗೇಟು ನೀಡಿದ ಭಾರತದ ಪ್ರಭ್‌ಜೋತ್ ಸಿಂಗ್ 51ನೇ ನಿಮಿಷದಲ್ಲಿ ಗೋಲು ದಾಖಲಿಸಿ ಜಯದ ಮಹಲು ಕಟ್ಟಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.