ಬೆಂಗಳೂರು: ಕರ್ನಾಟಕದ ಅಂಬಿಕಾ ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಓಪನ್ ಅಥ್ಲೆಟಿಕ್ ಕೂಟದ ಮಹಿಳೆಯರ ವಿಭಾಗದ ಶಾಟ್ಪಟ್ನಲ್ಲಿ ಚಿನ್ನದ ಪದಕ ಗೆದ್ದರು.

ಬೆಳಿಗ್ಗೆ ನಡೆದ ಶಾಟ್ಪಟ್ ಸ್ಪರ್ಧೆಯಲ್ಲಿ ಅಂಬಿಕಾ 14.14 ಮೀಟರ್ಸ್ ದೂರ ಎಸೆತದ ಸಾಧನೆ ಮಾಡಿದರು. ಇದೇ ವಿಭಾಗದಲ್ಲಿ ಕರ್ನಾಟಕದ ಬೃಂದಾ ಗೌಡ ಅವರು ಕಂಚಿನ ಪದಕ ಪಡೆದರು.

ಮಹಿಳೆಯರ ಹೈಜಂಪ್ನಲ್ಲಿ ಕರ್ನಾಟಕದ ಪಲ್ಲವಿ ಪಾಟೀಲ ಮತ್ತು ಬಿ. ಸುಪ್ರಿಯಾ ಅವರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಗಳಿಸಿದರು.

ಪುರುಷರ 100 ಮೀ ಓಟದಲ್ಲಿ ಕರ್ನಾಟಕದ ಆರ್ಯನ್ ಮನೋಜ್ ಅವರು ಬೆಳ್ಳಿ ಪದಕ ಪಡೆದರು. ರೈಲ್ವೆಸ್ ತಂಡದ ತಮಿಳ್ ಅರಸು ಅವರು ಮೊದಲ ಸ್ಥಾನ ಗಳಿಸಿದರು. 200 ಮೀ ಓಟದಲ್ಲಿ ಕರ್ನಾಟಕದ ಅಭಿನ್ ದೇವಾಡಿಗ ಕಂಚು ಪಡೆದರು.

ಫಲಿತಾಂಶಗಳು

ಪುರುಷರು: 100 ಮೀ ಓಟ: ತಮಿಳ್ ಅರಸು ಎಸ್ (ರೈಲ್ವೆಸ್; 10.46ಸೆ)–1, ಆರ್ಯನ್ ಮನೋಜ್ (ಕರ್ನಾಟಕ; 10.62ಸೆ)–2, ವಿಭಾಸ್ಕರ್ ಕುಮಾರ್ (ಬಿಹಾರ; 10.63ಸೆ)–3.

200 ಮೀ ಓಟ: ಶುಭಂ (ಹರಿಯಾಣ; 21.25ಸೆ) ಹಾಗೂ ತಮಿಳ್ ಅರಸು ಎಸ್ (ರೈಲ್ವೆಸ್; 21.25ಸೆ) –1, ಅಭಿನ್ ದೇವಾಡಿಗ (ಕರ್ನಾಟಕ; 21.28ಸೆ)–3

400 ಮೀ ಹರ್ಡಲ್ಸ್: ರಕ್ಷಿತ್ ರವೀಂದ್ರನ್ (ಎನ್ಸಿಒಇ, ಬೆಂಗಳೂರು; 52.74ಸೆ)–1, ಕುನಾಲ್ ಕುಮಾರ್ (ಪಿಎಸ್ಸಿ; 52.78ಸೆ)–2, ಎಲ್. ಶರಭೇಶ್ವರ್ (ತಮಿಳುನಾಡು; 53.01ಸೆ)–3

ಹೈಜಂಪ್: ಸರ್ವೇಶ್ ಅನಿಲ್ ಕುಶಾರೆ (ಮಹಾರಾಷ್ಟ್ರ; 2.21 ಮೀ) –1, ತೇಜಸ್ವಿನ್ ಶಂಕರ್ (ಜೆಎಸ್ಡಬ್ಲ್ಯು; 2.19 ಮೀ)–2, ಆದರ್ಶ ರಾಮ್ (ತಮಿಳುನಾಡು; 2.13ಮೀ)–3.

ಲಾಂಗ್ಜಂಪ್: ಮೊಹಮ್ಮದ್ ಅನೀಸ್ ಯಾಹ್ಯಾ (ರಿಲಯನ್ಸ್; 7.93ಮೀ)–1, ಸನ್ನಿ ಕುಮಾರ್ (ಬಿಹಾರ; 7.90ಮೀ)–2, ಪಿ. ಡೇವಿಡ್ (ಎನ್ಸಿಒಇ, ಬೆಂಗಳೂರು; 7.78ಮೀ)–3

ಮಹಿಳೆಯರು:

100 ಮೀ ಓಟ: ಅಭಿನಯಾ ರಾಜರಾಜನ್ (ಎನ್ಸಿಒಇ; ತಿರುವನಂತಪುರ; 11.55ಸೆ)–1, ಎಸ್.ಎಸ್. ಸ್ನೇಹಾ (ಕರ್ನಾಟಕ; 11.63ಸೆ)–2, ಏಂಜೆಲ್ ಸಿಲ್ವಿಯಾ ಎಂ (ಎನ್ಸಿಒಇ; ಬೆಂಗಳೂರು; 11.71ಸೆ)–3.

200ಮೀ ಓಟ: ಏಂಜೆಲ್ ಸಿಲ್ವಿಯಾ (ಎನ್ಸಿಒಇ ಬೆಂಗಳೂರು; 23.81ಸೆ)–1, ವಿ. ಸುಧೀಕ್ಷಾ (ಎನ್ಸಿಒಇ, ಬೆಂಗಳೂರು; 24.32ಸೆ)–2, ಶಿವಾನಿ ಸೈನಿ (ಉತ್ತರಪ್ರದೇಶ; 24.40ಸೆ)–3

100 ಮೀ ಹರ್ಡಲ್ಸ್: ಸಿ. ಅಂಜಲಿ (ಕೇರಳ: 13.65ಸೆ)–1, ಪ್ರಾಂಜಲಿ ದಿಲೀಪ್ ಪಾಟೀಲ (ಜೆಎಸ್ಡಬ್ಲ್ಯು; 13.83ಸೆ)–2, ಕೆ. ನಂದಿನಿ (ತಮಿಳುನಾಡು; 13.85ಸೆ)–3

ಶಾಟ್ಪಟ್: ವಿ. ಅಂಬಿಕಾ (ಕರ್ನಾಟಕ; 14.14ಮೀ)–1, ತುಫೈಲ್ ಸುಲ್ತಾನ್ ಖಾನ್ (ಛತ್ತೀಸಗಡ; 12.70 ಮೀ)–2, ಬೃಂದಾ ಗೌಡ (ಕರ್ನಾಟಕ; 12.59 ಮೀ)–3.

ಹೈಜಂಪ್ : ಗೋಪಿಕಾ ಕೆ (ತಮಿಳುನಾಡು; 1.80ಮೀ)–1, ಪಲ್ಲವಿ ಪಾಟೀಲ (ಕರ್ನಾಟಕ; 1.76ಮೀ)–2, ಎಸ್. ಬಿ. ಸುಪ್ರಿಯಾ (ಕರ್ನಾಟಕ; 1.74ಮೀ)–3

ಟ್ರಿಪಲ್ ಜಂಪ್: ಎನ್.ವಿ. ಶೀನಾ (ಕೇರಳ; 13.05ಮೀ)–1, ನಿಮಿಷಾ ಧ್ಯಾಮ (ಜೆಎಸ್ಡಬ್ಲ್ಯು; 12.88ಮೀ)–2, ಶಾರ್ವರಿ ಅವಿನಾಶ್ ಪಾರು (ಜೆಎಸ್ಡಬ್ಲ್ಯು; 12.76ಮೀ)–3.

ಹೈಜಂಪ್: ಸರ್ವೇಶ್ ಪ್ರಥಮ

ತೇಜಸ್ವಿನ್ಗೆ ಬೆಳ್ಳಿ ಅಗ್ರಮಾನ್ಯ ಹೈಜಂಪ್ ಅಥ್ಲೀಟ್ ತೇಜಸ್ವಿನ್ ಶಂಕರ್ ಅವರನ್ನು ಇಲ್ಲಿ ನಡೆದ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಸರ್ವೇಶ್ ಅನಿಲ್ ಕುಶಾರೆ ಹಿಂದಿಕ್ಕಿದರು. ಶನಿವಾರ ನಡೆದ ಸ್ಪರ್ಧಯಲ್ಲಿ ಸರ್ವೇಶ್ ಅವರು 2.21 ಮೀಟರ್ಸ್ ಎತ್ತರ ಜಿಗಿದ ಸಾಧನೆ ಮಾಡಿದರು.

ಜೆಎಸ್ಡಬ್ಲ್ಯು ತಂಡವನ್ನು ಪ್ರತಿನಿಧಿಸಿದ್ದ ತೇಜಸ್ವಿನ್ (2.19ಮೀ) ಅಲ್ಪ ಅಂತರದಲ್ಲಿ ಹಿಂದುಳಿದರು. ಎರಡನೇ ಸ್ಥಾನ ಪಡೆದರು. ತಮಿಳುನಾಡಿದ ಆದರ್ಶ್ ರಾಮ್ ಕಂಚು ಪಡೆದರು. ತೇಜಸ್ವಿನ್ ಅವರು ಕಳೆದ ಕೆಲವು ವರ್ಷಗಳಿಂದ ಡಿಕ್ಯಾತಲಾನ್ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಈಚೆಗಷ್ಟೇ ಗುಮಿಯಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್ಷಿಪ್ನಲ್ಲಿ ಅವರು ಡಿಕ್ಯಾತಲಾನ್ನಲ್ಲಿ ಬೆಳ್ಳಿ ಪದಕ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.