ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಹಾಕಿ: ಭಾರತಕ್ಕೆ ಗೆಲುವು

Published 25 ಆಗಸ್ಟ್ 2023, 13:33 IST
Last Updated 25 ಆಗಸ್ಟ್ 2023, 13:33 IST
ಅಕ್ಷರ ಗಾತ್ರ

ನವದೆಹಲಿ: ಭಾರತ ತಂಡದವರು ಮಹಿಳೆಯರ ಏಷ್ಯನ್‌ ಹಾಕಿ ಫೈವ್ಸ್ ವಿಶ್ವಕಪ್‌ ಅರ್ಹತಾ ಹಂತದ ಮೊದಲ ಪಂದ್ಯದಲ್ಲಿ 7–2 ಗೋಲುಗಳಿಂದ ಮಲೇಷ್ಯಾ ತಂಡವನ್ನು ಮಣಿಸಿದರು.

ಒಮಾನ್‌ನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ನವಜೋತ್‌ ಕೌರ್‌ (3 ಮತ್ತು 28ನೇ ನಿ.), ಅಕ್ಷತಾ (4), ಮರಿಯಾನ ಕುಜೂರ್ (17), ಮೋನಿಕಾ ದೀಪಿ ಟೊಪ್ಪೊ (12 ಮತ್ತು 20) ಹಾಗೂ ಮಹಿಮಾ ಚೌಧರಿ (28) ಅವರು ಭಾರತ ತಂಡದ ಪರ ಗೋಲು ಗಳಿಸಿದರು.

ಮಲೇಷ್ಯಾ ತಂಡಕ್ಕೆ ವಾನ್‌ ವಾನ್ (7) ಮತ್ತು ಅಜೀಜ್‌ ಝಫೀರಾ (11) ಅವರು ಚೆಂಡನ್ನು ಗುರಿ ಸೇರಿಸಿದರು.

‘ಹಾಕಿ ಫೈವ್ಸ್‌‘ ಮಾದರಿಯಲ್ಲಿ ಪ್ರತಿ ತಂಡದಲ್ಲಿ ತಲಾ ಐದು ಮಂದಿ ಆಟಗಾರ/ ಆಟಗಾರ್ತಿಯರು ಇರುವರು. ತಲಾ 10 ನಿಮಿಷಗಳ ಎರಡು ಅವಧಿಗಳ ಆಟ ನಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT