ಕಠ್ಮಂಡು (ಪಿಟಿಐ): ಭಾರತದ ಕುಸ್ತಿಪಟುಗಳು ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾನುವಾರ ಚಿನ್ನದ ನಗೆ ಸೂಸಿದರು. ಒಂದೇ ದಿನ ಭಾರತಕ್ಕೆ 4 ಚಿನ್ನದ ಪದಕಗಳು ಒಲಿದವು. ಈ ಮೂಲಕ ಎಲ್ಲ 12 ವಿಭಾಗಗಳಲ್ಲೂ ಚಿನ್ನ ಗೆದ್ದ ಸಾಧನೆ ಮಾಡಿತು.

ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಸಾಕ್ಷಿ ಮಲಿಕ್ ಪದಕಗಳ ಬೇಟೆಗೆ ನಾಂದಿ ಹಾಡಿದರು. 62 ಕೆಜಿ ವಿಭಾಗದಲ್ಲಿ ಅವರು ಚಿನ್ನಕ್ಕೆ ಕೊರಳೊಡ್ಡಿದರೆ 23 ವರ್ಷದೊಳಗಿನವರ ವಿಭಾಗದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಗೆದ್ದಿದ್ದ ರವೀಂದ್ರ, ಪುರುಷರ ಫ್ರೀಸ್ಟೈಲ್‌ನ 61 ಕೆಜಿ ವಿಭಾಗದಲ್ಲಿ ಮೊದಲಿಗರಾದರು.

ಸಾಕ್ಷಿ ಮಲಿಕ್ ಎಲ್ಲ ಬೌಟ್‌ಗಳಲ್ಲೂ ಏಕಪಕ್ಷೀಯ ಜಯ ಸಾಧಿಸಿದರು. ಫೈನಲ್‌ನಲ್ಲೂ ಪಾರಮ್ಯ ಮರೆದರು. ಶ್ರೀಲಂಕಾ ಮತ್ತು ಬಾಂಗ್ಲಾದೇಶದ ಪೈಲ್ವಾನರನ್ನು ಸುಲಭವಾಗಿ ಮಣಿಸಿದ್ದ ರವೀಂದ್ರ ಅವರಿಗೆ ಪದಕದ ಹಣಾಹಣಿಯಲ್ಲಿ ಪಾಕಿಸ್ತಾನದ ಬಿಲಾಲ್ ಪ್ರಬಲ ಪೈಪೋಟಿ ನಿಡಿದರು. ಆದರೂ ಗೆಲುವು ಭಾರತದ ಕುಸ್ತಿಪಟುವಿಗೆ ಒಲಿಯಿತು.

ಪುರುಷರ 86 ಕೆಜಿ ಫ್ರೀಸ್ಟೈಲ್‌ನಲ್ಲಿ ಪವನ್ ಕುಮಾರ್ ಮತ್ತು ಮಹಿಳೆಯರ 59 ಕೆಜಿ ವಿಭಾಗದಲ್ಲಿ ಅನ್ಶು ಚಿನ್ನ ಗಳಿಸಿದರು. ಸೋಮವಾರ 74 ಕೆಜಿ ವಿಭಾಗದಲ್ಲಿ ಗೌರವ್ ಬಲಿಯನ್ ಮತ್ತು 68 ಕೆಜಿ ವಿಭಾಗದಲ್ಲಿ ಅನಿತಾ ಶೊರೇನ್ ಕಣಕ್ಕೆ ಇಳಿಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.