ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ಯಾರಿಸ್‌ನಲ್ಲಿ ಆ.28ರಿಂದ ಪ್ಯಾರಾಲಿಂಪಿಕ್ಸ್‌ ಆರಂಭ: ಭಾರತದ ತಂಡದಲ್ಲಿ 179 ಮಂದಿ

84 ಮಂದಿ ಸ್ಪರ್ಧಿಗಳ ಜೊತೆ 95 ಮಂದಿ ಸಿಬ್ಬಂದಿ ಪ್ರಯಾಣ
Published 25 ಆಗಸ್ಟ್ 2024, 22:30 IST
Last Updated 25 ಆಗಸ್ಟ್ 2024, 22:30 IST
ಅಕ್ಷರ ಗಾತ್ರ

ನವದೆಹಲಿ: ಪ್ಯಾರಿಸ್‌ನಲ್ಲಿ ಇದೇ 28ರಿಂದ ಪ್ರಾರಂಭವಾಗಲಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ 84 ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಅವರ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಅಧಿಕಾರಿಗಳು, ವೈಯಕ್ತಿಕ ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿ ಸೇರಿದಂತೆ ಒಟ್ಟು 95 ಮಂದಿ ಸ್ಪರ್ಧಿಗಳ ಜೊತೆಯಲ್ಲಿರಲಿದ್ದಾರೆ.

ಭಾರತದ ಪ್ಯಾರಾಲಿಂಪಿಕ್ಸ್‌ ತಂಡದಲ್ಲಿ ಒಟ್ಟು 179 ಮಂದಿ ಇರಲಿದ್ದಾರೆ. 95ರಲ್ಲಿ 77 ಮಂದಿ ತಂಡದ ಅಧಿಕಾರಿಗಳು, ಒಂಬತ್ತು ವೈದ್ಯಕೀಯ ಸಿಬ್ಬಂದಿ ಮತ್ತು ಒಂಬತ್ತು ಇತರ ಅಧಿಕಾರಿಗಳು ಇದ್ದಾರೆ.

ಭಾರತವು ಪ್ಯಾರಿಸ್ ಪ್ಯಾರಾಲಿಂಪಿ ಕ್ಸ್‌ನ 12 ಕ್ರೀಡೆಗಳಲ್ಲಿ ಸ್ಪರ್ಧಿಸಲು 84 ಕ್ರೀಡಾಪಟುಗಳನ್ನು ಕಳುಹಿಸುತ್ತಿದೆ. 2021ರಲ್ಲಿ ಟೋಕಿಯೊ ಪ್ಯಾರಾಲಿಂಪಿಕ್ಸ್‌ ನಲ್ಲಿ  ಒಂಬತ್ತು ಕ್ರೀಡೆಗಳಲ್ಲಿ 54 ಮಂದಿ  ಸ್ಪರ್ಧಿಸಿದ್ದರು.

‘ಕೆಲವು ಪ್ಯಾರಾ ಅಥ್ಲೀಟ್‌ಗಳ ವಿಶೇಷ ಅಗತ್ಯಗಳನ್ನು ಪರಿಗಣಿಸಿ ವೈಯಕ್ತಿಕ ತರಬೇತುದಾರರನ್ನು ತಂಡದಲ್ಲಿ ಸೇರಿಸಲಾಗಿದೆ. ಅವರು ಚೆಫ್ ಡಿ ಮಿಷನ್/ತಂಡದ ಮುಖ್ಯ ತರಬೇತುದಾರರ ನಿರ್ದೇಶನದಂತೆ ಇತರ ಆಟಗಾರರಿಗೆ ಅಗತ್ಯ ಸೇವೆಗಳನ್ನು ಒದಗಿಸುತ್ತಾರೆ’ ಎಂದು ಸಚಿವಾಲಯ ತಿಳಿಸಿದೆ.

ಟೋಕಿಯೊ ಪ್ಯಾರಾಲಿಂಪಿಕ್ಸ್‌ ಗೆದ್ದ ಚಿನ್ನದ ಪದಕವನ್ನು ಕಾಪಾಡಿಕೊಳ್ಳುವ ನಿರೀಕ್ಷೆಯಲ್ಲಿರುವ ಜಾವೆಲಿನ್‌ ಥ್ರೋ ಅಥ್ಲೀಟ್ ಸುಮಿತ್‌ ಅಂಟಿಲ್‌ ಮತ್ತು ಶೂಟರ್‌ ಅವನಿ ಲೇಖರಾ ಅವರಂತಹ ಸ್ಪರ್ಧಿಗಳಿಗೆ ಇದು ಅನುಕೂಲವಾಗಲಿದೆ.

‘ಯಾವುದೇ ಪ್ಯಾರಾ ಕ್ರೀಡೆಯಲ್ಲಿ ಭಾಗವಹಿಸುವವರಿಗೆ ವೈಯಕ್ತಿಕ ತರಬೇ ತುದಾರರು ಮತ್ತು ನೆರವು ಸಿಬ್ಬಂದಿಯ ಅಗತ್ಯವಿರುತ್ತದೆ. ಆದ್ದರಿಂದ ಹೆಚ್ಚಿನ ಬೆಂಬಲ ಸಿಬ್ಬಂದಿ ಹೊಂದಿರುವುದು ಹೊಸದೇನಲ್ಲ’ ಎಂದು ತಂಡದ
ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚೆಫ್ ಡಿ ಮಿಷನ್ ಸತ್ಯ ಪ್ರಕಾಶ್‌ ಸಾಂಗ್ವಾನ್‌ ಅವರೊಂದಿಗೆ ಪ್ಯಾರಿಸ್‌ಗೆ ತೆರಳಿದ ಪ್ಯಾರಾಲಿಂಪಿಕ್‌ ಸಂಸ್ಥೆಯ ಅಧ್ಯಕ್ಷ ದೇವೇಂದ್ರ ಝಝಾರಿಯಾ ಅವರು ‘ನಾನು ಕ್ರೀಡಾಗ್ರಾಮದ ಹೊರಗೆ ಇದ್ದು ಎಲ್ಲ ಅಥ್ಲೀಟ್‌ಗಳನ್ನು ನೋಡಿ ಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ. ಕೆಲ ಸ್ಪರ್ಧೆಗಳು ಪ್ಯಾರಿಸ್‌ನಿಂದ ಹೊರಗಡೆ ನಡೆಯಲಿವೆ.

‘ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ನಲ್ಲಿ  ಹತ್ತಕ್ಕೂ ಹೆಚ್ಚು ಚಿನ್ನದ ಪದಕ ಜಯಿಸುವ ಗುರಿ ಇದೆ. ಒಟ್ಟು 25ಕ್ಕೂ ಹೆಚ್ಚು ಪದಕಗಳನ್ನು ಭಾರತ ಸ್ಪರ್ಧಿಗಳು ಗೆಲ್ಲಲಿದ್ದಾರೆ’ ಎಂದು ಝಝಾರಿಯಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT