ಟೋಕಿಯೊ: ಭಾರತದ ಶೂಟರ್ಗಳು, 25ನೇ ಡೆಫಿಲಿಂಪಿಕ್ಸ್ನಲ್ಲಿ (ಶ್ರವಣದೋಷವಿರುವರಿಗೆ ನಡೆಯುವ ಕ್ರೀಡೆ) ಮಂಗಳವಾರ 10 ಮೀ.ಏರ್ ರೈಫಲ್ ಮಿಶ್ರ ಸ್ಪರ್ಧೆಯಲ್ಲಿ ಚಿನ್ನ ಮತ್ತು ಕಂಚಿನ ಪದಕಗಳನ್ನು ಗೆದ್ದು ಗಮನ ಸೆಳೆದರು.

ಧನುಷ್ ಶ್ರೀಕಾಂತ್– ಮಹಿತ್ ಸಂಧು ಜೋಡಿ ಫೈನಲ್ನಲ್ಲಿ ದಕ್ಷಿಣ ಕೊರಿಯಾದ ಜಿಯೊನ್ ದೆಯಿನ್– ಕಿಮ್ ವೂರಿಮ್ ಜೋಡಿಯನ್ನು 17–7 ರಿಂದ ಸೋಲಿಸಿತು. ಮೊಹಮ್ಮದ್ ಮುರ್ತಾಜಾ ವನಿಯಾ– ಕೋಮಲ್ ಮಿಲಿಂದ್ ವಾಘ್ಮಾರೆ ಜೋಡಿ ಕಂಚಿನ ಪದಕಕ್ಕಾಗಿ ನಡೆದ ಸೆಣಸಾಟದಲ್ಲಿ ಉಕ್ರೇನಿನ ವಾಯ್ಲೆಟಾ ಲಿಕೋವಾ– ಅಲೆಕ್ಸಾಂಡರ್ ಕೊಸ್ಟಿಕ್ ಜೋಡಿಯನ್ನು ಮಣಿಸಿತು.

ಇದು ಧನುಷ್ ಅವರಿಗೆ ಡೆಫಿಲಿಂಪಿಕ್ಸ್ನಲ್ಲಿ ಎರಡನೇ ಚಿನ್ನ. ಮಹಿತ್ ವೈಯಕ್ತಿಕ ಸ್ಪರ್ಧೆಯಲ್ಲಿ ಈ ಮೊದಲ ಬೆಳ್ಳಿ ಗೆದ್ದಿದ್ದರು.

ಭಾರತದ ಶೂಟರ್ಗಳು ಮೂರು ದಿನಗಳ ಸ್ಪರ್ಧೆಗಳಲ್ಲಿ ಒಟ್ಟು 9 ಪದಕಗಳನ್ನು ಗೆದ್ದಿದ್ದಾರೆ. ಬುಧವಾರ ಏರ್ ಪಿಸ್ತೂಲ್ ಮಿಶ್ರ ವಿಭಾಗದ ಸ್ಪರ್ಧೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.