ಬೆಂಗಳೂರು: ಭಾರತದ ಪ್ರಮುಖ ಮೋಟಾರ್ ಸ್ಪೋರ್ಟ್ಸ್ ಲೀಗ್ ಆಗಿರುವ ಇಂಡಿಯನ್ ರೇಸಿಂಗ್ ಫೆಸ್ಟಿವಲ್ (ಐಆರ್ಎಫ್)ನಲ್ಲಿ ಪಾಲ್ಗೊಳ್ಳುವ ಬೆಂಗಳೂರು ಫ್ರಾಂಚೈಸಿಯ ಮಾಲೀಕತ್ವವನ್ನು ಕನ್ನಡದ ನಟ ಕಿಚ್ಚ ಸುದೀಪ್ ವಹಿಸಿಕೊಂಡಿದ್ದಾರೆ. ನಗರದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಅವರು ತಮ್ಮ ರೇಸಿಂಗ್ ತಂಡ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ (ಕೆಕೆಬಿ) ತಂಡದ ಘೋಷಣೆ ಮಾಡಿದರು.

ಆಗಸ್ಟ್ನಲ್ಲಿ ನಡೆಯುವ ಈ ಮೋಟಾರ್ ರೇಸಿಂಗ್ ಲೀಗ್ನಲ್ಲಿ ಬೆಂಗಳೂರು, ಹೈದರಾಬಾದ್, ದೆಹಲಿ, ಕೋಲ್ಕತ್ತ, ಚೆನ್ನೈ, ಗೋವಾ ಮತ್ತು ಇತರ ನಗರಗಳ ತಂಡಗಳು ಭಾಗವಹಿಸಲಿವೆ. ವಿಶ್ವ ದರ್ಜೆಯ ಟ್ರ್ಯಾಕ್ಗಳು ಮತ್ತು ಸರ್ಕ್ಯೂಟ್ಗಳಲ್ಲಿ ಐದು ಸುತ್ತುಗಳನ್ನು ಒಳಗೊಂಡು ಈ ಲೀಗ್ ನಡೆಯಲಿದೆ.

ಖಾಸಗಿ ಹೋಟೆಲ್ನಲ್ಲಿ ಸುದೀಪ್ ಅವರು ರೇಸಿಂಗ್ ಕಾರಿನೊಂದಿಗೆ ಫೋಟೊಗೆ ಪೋಸ್ ನೀಡಿದ್ದಾರೆ.

‘ಕ್ರಿಕೆಟ್ ಅಂದರೆ ಹೆಚ್ಚು ಮಾತನಾಡುತ್ತಿದ್ದೆ. ಕ್ರೀಡೆ ಅಂದರೆ ಅದರ ಜೊತೆ ಗುರುತಿಸಿಕೊಳ್ಳುತ್ತೇನೆ. ಮೋಟಾರ್ ರೇಸಿಂಗ್ ಸುಲಭವಲ್ಲ. ಈ ಕ್ಷೇತ್ರಕ್ಕೆ ಬರುವ ಮೊದಲು ಸಾಕಷ್ಟು ಚರ್ಚೆ ಮಾಡಿದ್ದೇವೆ. ಮಾಲೀಕರಾದರೂ ಕಾರಿನೊಳಗೆ ಕೂರುವ ಅವಕಾಶವಿಲ್ಲ. ಅದಕ್ಕೆ ಲೈಸೆನ್ಸ್ ಬೇಕಾಗುತ್ತದೆ’ ಎಂದರು.

‘ನಾನು ಕೆಸಿಸಿ ಹಾಗೂ ಸಿಸಿಎಲ್ ಆಡಿದ್ದೇನೆ. ಆದರೆ ನಾನು ಬೆಂಗಳೂರಿನ ತಂಡ ಖರೀದಿಸುತ್ತೇನೆ ಅಂದುಕೊಂಡಿರಲಿಲ್ಲ. ಪತ್ನಿ ಪ್ರಿಯಾ ಸಹ ನಿರ್ಧಾರ ಕೈಗೊಳ್ಳಲು ನೆರವಾದರು’ ಎಂದು ಅವರು ಹೇಳಿದರು. ಪ್ರಿಯಾ ಅವರೂ ಈ ವೇಳೆ ಹಾಜರಿದ್ದರು.

ರೇಸಿಂಗ್ ಪ್ರಮೋಷನ್ಸ್ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕ ಅಖಿಲೇಶ್ ರೆಡ್ಡಿ ಮಾತನಾಡಿ ‘ಸುದೀಪ್ ಅಂಥ ಸೂಪರ್ಸ್ಟಾರ್ ಪ್ರವೇಶದಿಂದ ತಾರಾಬಲದ ಜೊತೆಗೆ ಇಂಡಿಯನ್ ರೇಸಿಂಗ್ ಲೀಗ್ನ ವರ್ಚಸ್ಸು ಹೆಚ್ಚಿಸಲಿದೆ’ ಎಂದರು.

‘ಇದು ನನ್ನ ಪಾಲಿಗೆ ಬರೇ ಇನ್ನೊಂದು ತಂಡವಲ್ಲ. ಇದು ಭಾವನೆ’ ಎಂದು ಸುದೀಪ್ ಹೇಳಿದರು.

ಇತರ ಕೆಲವು ತಂಡಗಳನ್ನೂ ಸೆಲೆಬ್ರಿಟಿಗಳು ಖರೀದಿಸಿದ್ದಾರೆ. ಜಾನ್ ಅಬ್ರಹಾಂ (ಗೋವಾ), ಸೌರವ್ ಗಂಗೂಲಿ (ಕೋಲ್ಕತ್ತ) ಇವರಲ್ಲಿ ಪ್ರಮುಖರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.