ಚೆನ್ನೈ (ಪಿಟಿಐ): ಕರ್ನಾಟಕದ ರಮೇಶ ಬೂದಿಹಾಳ ಅವರು ಏಷ್ಯನ್ ಸರ್ಫಿಂಗ್ ಚಾಂಪಿಯನ್ಷಿಪ್ನಲ್ಲಿ ಪದಕ ಗೆದ್ದ ಭಾರತದ ಮೊದಲ ಸರ್ಫರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

25 ವರ್ಷದ ರಮೇಶ ಭಾನುವಾರ ನಡೆದ ಪುರುಷರ ವಿಭಾಗದ ಫೈನಲ್ನಲ್ಲಿ 12.60 ಅಂಕಗಳೊಂದಿಗೆ ಕಂಚಿನ ಪದಕ ಗೆದ್ದರು. ಪದಕ ಸುತ್ತು ತಲುಪಿದ ಭಾರತದ ಮೊದಲ ಸ್ಪರ್ಧಿಯೂ ಅವರೇ ಆಗಿದ್ದಾರೆ.

ದಕ್ಷಿಣ ಕೊರಿಯಾದ ಕನೋವಾ ಹೀಜೆ 15.17 ಅಂಕಗಳೊಂದಿಗೆ ಚಿನ್ನ ಗೆದ್ದರೆ, ಇಂಡೊನೇಷ್ಯಾದ ಪಜರ್ ಅರಿಯಾನಾ (14.57 ಅಂಕ) ಬೆಳ್ಳಿ ತಮ್ಮದಾಗಿಸಿಕೊಂಡರು.

ಓಪನ್ ಮಹಿಳಾ ವಿಭಾಗದಲ್ಲಿ ಜಪಾನ್ನ ಅನ್ರಿ ಮಾಟ್ಸುನೊ (14.90 ಅಂಕ) ಅವರು ತಮ್ಮದೇ ದೇಶದ ಸುಮೊಮೊ ಸಾಟೊ (13.70 ಅಂಕ) ಅವರ ತೀವ್ರ ಸವಾಲನ್ನು ಹಿಂದಿಕ್ಕಿ ಚಿನ್ನ ಗೆದ್ದರು. ಥಾಯ್ಲೆಂಡ್ನ ಇಸಾಬೆಲ್ ಹಿಗ್ಸ್ (11.76 ಅಂಕ) ಕಂಚು ಜಯಿಸಿದರು.

ಪುರುಷರ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಕನೋವಾ 18 ವರ್ಷದೊಳಗಿನ ಬಾಲಕರ ವಿಭಾಗದಲ್ಲೂ (14.33 ಅಂಕ) ಪಾರಮ್ಯ ಮೆರೆದು, ಡಬಲ್ ಚಿನ್ನದ ಸಾಧನೆ ಮಾಡಿದರು. ಚೀನಾದ ಶಿಡಾಂಗ್ ವು (13.10 ಅಂಕ) ಶುಲೌ ಜಿಯಾಂಗ್ (8 ಅಂಕ) ಕ್ರಮವಾಗಿ ಬೆಳ್ಳಿ ಮತ್ತು ಕಂಚು ತಮ್ಮದಾಗಿಸಿಕೊಂಡರು.

18 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಚೀನಾದ ಸಿಕಿ ಯಾಂಗ್ (14.50 ಅಂಕ) ಚಾಂಪಿಯನ್ ಆದರು. ಚೀನಾದ ಮತ್ತೊಬ್ಬ ಸ್ಪರ್ಧಿ ಶುಹಾನ್ ಜಿನ್ (10.33), ಥಾಯ್ಲೆಂಡ್ನ ಇಸಾಬೆಲ್ (8.10) ಕ್ರಮವಾಗಿ ನಂತರದ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.