ಮಂಗಳೂರು: ಅಮೆರಿಕ ಮತ್ತು ಕೆನಡಾ ಸೇರಿದಂತೆ ವಿವಿಧ ದೇಶಗಳ ಕ್ರೀಡಾಪಟುಗಳು ಪಾಲ್ಗೊಂಡಿರುವ ಗ್ರ್ಯಾಂಡ್ ಆರ್ಸಿಸಿ ಫಿಡೆ ರೇಟೆಡ್ ಚೆಸ್ ಟೂರ್ನಿಯಲ್ಲಿ 90ರ ಹರಯದ ಟಿ.ವಿ ಸುಬ್ರಹ್ಮಣ್ಯನ್ ಮತ್ತು ಮೂರು ವರ್ಷದ ಸರ್ವಗ್ಯ ಸಿಂಗ್ ಗಮನ ಸೆಳೆದಿದ್ದಾರೆ.

ನಗರದ ರಾವ್ಸ್ ಚೆಸ್ ಕಾರ್ನರ್ ಇಲ್ಲಿನ ಶಾರದಾ ಕಾಲೇಜು ಆವರಣದಲ್ಲಿ ಆಯೋಜಿಸಿರುವ ಆರು ದಿನಗಳ ಟೂರ್ನಿಯಲ್ಲಿ ಒಟ್ಟು 459 ಚೆಸ್ ಪಟುಗಳು ಪಾಲ್ಗೊಂಡಿದ್ದು ಅಮೆರಿಕ, ಶ್ರೀಲಂಕಾ, ಕೆನಡಾ, ಕಿನ್ಯಾ ಮತ್ತು ಸಿಂಗಪುರದವರೂ ಇದ್ದಾರೆ. ಗುರುವಾರ ಕ್ಲಾಸಿಕಲ್ ವಿಭಾಗದ ಸ್ಪರ್ಧೆಗಳು ಆರಂಭಗೊಂಡಿದ್ದು ಒಟ್ಟು ಒಂಬತ್ತು ಸುತ್ತುಗಳು 30ರಂದು ಕೊನೆಗೊಳ್ಳಲಿವೆ. ಇದರ ನಡುವೆ ರ್ಯಾಪಿಡ್ ಮತ್ತು ಬ್ಲಿಟ್ಜ್ ಟೂರ್ನಿಗಳು ನಡೆಯಲಿವೆ.

ಒಟ್ಟು 160ಕ್ಕೂ ಅಧಿಕ ಬಹುಮಾನವಿದ್ದು ಕ್ಲಾಸಿಕಲ್ನಲ್ಲಿ ಒಟ್ಟು ₹ 5 ಲಕ್ಷ ಸೇರಿದಂತೆ ₹ 8 ಲಕ್ಷ ಬಹುಮಾನ ಮೊತ್ತವಿದೆ. ಇಂಟರ್ನ್ಯಾಷನಲ್ ಮಾಸ್ಟರ್, ಆಂಧ್ರಪ್ರದೇಶದ ಎಂ.ಡಿ ಇಮ್ರಾನ್ ಟಾಪ್ ಬೋರ್ಡ್ನಲ್ಲಿ ಆಡುತ್ತಿದ್ದು ತಮಿಳುನಾಡಿನ ಶರವಣ ಕೃಷ್ಣ ಮತ್ತು ಆಂಧ್ರಪ್ರದೇಶದ ಮುರಳಿ ಕೃಷ್ಣ ಬಿ.ಟಿ ಟೂರ್ನಿಯಲ್ಲಿರುವ ಇತರ ಇಂಟರ್ನ್ಯಾಷನಲ್ ಮಾಸ್ಟರ್ಗಳು. ಸರವಣ ಟಾಪ್ ಮೂರನೇ ಬೋರ್ಡ್ನಲ್ಲಿದ್ದು ಗೋವಾದ ಲಾಡ್ ಮಂದಾರ್ ಪ್ರದೀಪ್ ಎರಡನೇ ಬೊರ್ಡ್ನಲ್ಲಿದ್ದಾರೆ. ಮುರಳಿಕೃಷ್ಣ ಏಳನೇ ಬೋರ್ಡ್ನಲ್ಲಿದ್ದಾರೆ.

ಚೆಸ್ ವಲಯದಲ್ಲಿ ಟಿವಿಎಸ್ ಎಂದೇ ಪರಿಚಿತರಾಗಿರುವ 91 ವರ್ಷದ ಸುಬ್ರಹ್ಮಣ್ಯನ್ ಬಹುತೇಕ ಎಲ್ಲ ಪ್ರಮುಖ ಟೂರ್ನಿಗಳಲ್ಲೂ ಹಾಜರಿರುತ್ತಾರೆ. ಮಧ್ಯಪ್ರದೇಶದ ಸರ್ವಗ್ಯ ಅಣ್ಣ–ಅಕ್ಕಂದಿರ ವಿರುದ್ಧ ಸ್ಪರ್ಧಿಸಿ ಅನುಭವ ಗಳಿಸುವ ಉದ್ದೇಶದಿಂದ ಬಂದಿದ್ದಾನೆ. ಮೊದಲ ಸುತ್ತಿನಲ್ಲಿ ಸೋತರೂ ಹುಮ್ಮಸ್ಸಿನಿಂದ ಕಣದಲ್ಲಿದ್ದಾನೆ.

ಉದ್ಘಾಟನೆ

ಗುರುವಾರ ಬೆಳಿಗ್ಗೆ ನಡೆದ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಭೂಮರೆಡ್ಡಿ ಅವರು ಟೂರ್ನಿಗೆ ಚಾಲನೆ ನೀಡಿದರು. ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ.ಬಿ ಪುರಾಣಿಕ್, ಕರ್ನಾಟಕ ಚೆಸ್ ಸಂಸ್ಥೆಯ ಅಧ್ಯಕ್ಷ ಟಿ.ಎನ್ ಮಧುಕರ, ದಕ್ಷಿಣ ಕನ್ನಡ ಚೆಸ್ ಸಂಸ್ಥೆಯ ಅಧ್ಯಕ್ಷೆ ಡಾ.ಅಮರಶ್ರೀ ಅಮರನಾಥ ಶೆಟ್ಟಿ ಹಿಂದಿನ ಅಧ್ಯಕ್ಷ ರಮೇಶ್ ಕೋಟೆ ಅತಿಥಿಗಳಾಗಿದ್ದರು.

ರಾವ್ಸ್ ಚೆಸ್ ಕಾರ್ನರ್ ಸ್ಥಾಪಕ, ಇಂಟರ್ನ್ಯಾಷನಲ್ ಮಾಸ್ಟರ್ ಶರಣ್ ರಾವ್, ಮಿಹಿಳಾ ಇಂಟರ್ನ್ಯಾಷನಲ್ ಮಾಸ್ಟರ್ ಇಶಾ ಶರ್ಮಾ, ಸಂಘಟಕ ಶುಭಾನಂದ ರಾವ್, ‘ಬೆಳಕು’ ಸಂಸ್ಥೆಯ ಜ್ಯೋತಿ ರಾವ್ ಹಾಗೂ ಕೀರ್ತನ್ ರಾವ್ ಪಾಲ್ಗೊಂಡಿದ್ದರು. ಅಶೆಲ್ ಡಿ‘ಸಿಲ್ವಾ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.