ಜರ್ಮನಿಯ ಹಾನ್ ಅವರು ಕಾರ್ಯವೈಖರಿ ನಮಗೆ ತೃಪ್ತಿ ತಂದಿಲ್ಲ ಎಂದಿರುವ ಫೆಡರೇಷನ್, ಇಬ್ಬರುವಿದೇಶಿ ತರಬೇತುದಾರರನ್ನು ಶೀಘ್ರವೇ ನೇಮಿಸಿಕೊಳ್ಳಲಾಗುವುದು ಎಂದು ತಿಳಿಸಿದೆ. ಹಾನ್ ಅವರ ಅವಧಿ ಟೋಕಿಯೊ ಒಲಿಂಪಿಕ್ಸ್ವರೆಗೂ ಇತ್ತು. ಅವರನ್ನು ಮುಂದುವರಿಸಲು ಎಎಫ್ಐ ಬಯಸಲಿಲ್ಲ. 2017ರ ನವೆಂಬರ್ನಲ್ಲಿ ಹಾನ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲಾಗಿತ್ತು. ಅವರು ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ, ಶಿವಪಾಲ್ ಸಿಂಗ್ ಮತ್ತು ಅನು ರಾಣಿ ಅವರಿಗೆ ತರಬೇತಿ ನೀಡಿದ್ದರು.