ಆದರೆ, ಇದರ ವಿರುದ್ಧ ರೋಮೆನಿಯಾದ ಸ್ಪರ್ಧಾಳು ಐಒಸಿಯ The Court of Arbitration for Sport (CAS) ಗೆ ದೂರು ಸಲ್ಲಿಸಿದ್ದರು. ‘ಒಲಿಂಪಿಕ್ ನಿಯಮಾವಳಿ ಪ್ರಕಾರ ಒಂದು ಬಾರಿ ಮನವಿ ಸಲ್ಲಿಸುವಾಗ ಒಂದು ನಿಮಿಷದಲ್ಲೇ ಸಲ್ಲಿಸಬೇಕು. ಆದರೆ, ಜೋರ್ಡಾನ್ ಚಿಲೀಸ್ ಕೋಚ್ ಒಂದು ನಿಮಿಷ ನಾಲ್ಕು ಸೆಕೆಂಡ್ ಸಮಯ ತೆಗೆದುಕೊಂಡು ಮನವಿ ಸಲ್ಲಿಸಿದ್ದರು. ಹಾಗಾಗಿ ನನಗೆ ಮೂರನೇ ಸ್ಥಾನ ಘೋಷಿಸಿ ಕಂಚಿನ ಪದಕ ನೀಡಬೇಕು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಈ ಕುರಿತು ತನಿಖೆ ನಡೆಸಿದ CAS, ಜೋರ್ಡಾನ್ ಚಿಲೀಸ್ ಅವರಿಗೆ ಕಂಚಿನ ಪದಕ ನೀಡಿದ ನಿರ್ಧಾರವನ್ನು ರದ್ದು ಮಾಡಿದೆ. ಅಲ್ಲದೇ ಚೋರ್ಡಾನ್ ಅವರಿಂದ ಕಂಚಿನ ಪದಕ ವಾಪಸ್ ಪಡೆದಿದೆ.
ಆದರೆ, ಈ ಕುರಿತು ಅಮೆರಿಕ ಒಲಿಂಪಿಕ್ಸ್ ಹಾಗೂ ಪ್ಯಾರಾ ಒಲಿಂಪಿಕ್ಸ್ ಕಮಿಟಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದೆ.
ಸಿಎಎಸ್, ಒಲಿಂಪಿಕ್ಸ್ ಹಾಗೂ ಪ್ಯಾರಾ ಒಲಿಂಪಿಕ್ಸ್ ನಲ್ಲಿನ ವ್ಯಾಜ್ಯಗಳನ್ನು ವಿಚಾರಿಸುವ ಇಂಟರನ್ಯಾಷನಲ್ ಒಲಿಂಪಿಕ್ ಕಮಿಟಿಯ ನ್ಯಾಯಿಕ ಸಂಸ್ಥೆಯಾಗಿದೆ.