ಬೆಂಗಳೂರು: ಕರ್ನಾಟಕ ಮಹಿಳಾ ತಂಡವು ಅಹಮದಾಬಾದ್ನಲ್ಲಿ ಭಾನುವಾರ ಮುಕ್ತಾಯಗೊಂಡ 78ನೇ ಸೀನಿಯರ್ ರಾಷ್ಟ್ರೀಯ ಈಜು ಚಾಂಪಿಯನ್ಷಿಪ್ನ ವಾಟರ್ಪೋಲೊ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡಿತು.

ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಕರ್ನಾಟಕ ತಂಡವು 9–6ರಿಂದ ಬಂಗಾಳ ತಂಡವನ್ನು ಮಣಿಸಿತು. ಪ್ರಚೇತಾ ಆರ್. ರಾವ್ (4) ಹಾಗೂ ನಿತ್ಯಾ ಸಿ. (3) ಕರ್ನಾಟಕದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಕೇರಳ ತಂಡದ ಪರ ಪದ್ಮಾ ಎಸ್. ಹಾಗೂ ಲಲಿತಾ ಸರದಾರ್ ತಲಾ 2 ಅಂಕ ಕಲೆಹಾಕಿದರು.

ಆದರೆ, ಕರ್ನಾಟಕ ಪುರುಷರ ತಂಡವು 6ನೇ ಸ್ಥಾನ ಪಡೆಯುವುದರೊಂದಿಗೆ ನಿರಾಶೆ ಅನುಭವಿಸಿತು.

ಸರ್ವೀಸಸ್ ತಂಡವು ಪುರುಷರ ವಿಭಾಗದಲ್ಲಿ ಚಾಂಪಿಯನ್ ಆದರೆ, ಮಹಿಳಾ ವಿಭಾಗದಲ್ಲಿ ಕೇರಳ ತಂಡವು ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.