ಗುವಾಹಟಿ : ಮಹಾರಾಷ್ಟ್ರದ ಕ್ರೀಡಾಪಟುಗಳು ಖೇಲೊ ಇಂಡಿಯಾ ಯೂತ್ ಕೂಟದಲ್ಲಿ ಮೇಲುಗೈ ಮುಂದುವರಿಸಿದ್ದಾರೆ. ಮಂಗಳವಾರದ ನಂತರ ಗೆದ್ದ ಚಿನ್ನದ ಪದಕಗಳ ಸಂಖ್ಯೆ 26ಕ್ಕೆ ಏರಿದೆ.

ಮಹಾರಾಷ್ಟ್ರ ಒಟ್ಟು 107 ಪದಕಗಳನ್ನು ಗೆದ್ದುಕೊಂಡು ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ದೇಶದ ಕ್ರೀಡಾಶಕ್ತಿಯಾದ ಹರಿಯಾಣ 21 ಚಿನ್ನ ಸೇರಿದಂತೆ ಒಟ್ಟು 67 ಪದಕಗಳೊಡನೆ ಎರಡನೇ ಸ್ಥಾನದಲ್ಲಿದೆ. ದೆಹಲಿ ಮೂರನೇ ಸ್ಥಾನದಲ್ಲಿದೆ.

ಮಹಾರಾಷ್ಟ್ರದ ಜಿಮ್ನಾಸ್ಟ್, ಸೈಕ್ಲಿಸ್ಟ್ಗಳು ತಲಾ ಮೂರು ಚಿನ್ನಗಳನ್ನು ಬಾಚಿಕೊಂಡು ಸಂಭ್ರಮಿಸಿದರು.

ಕೇರಳದ ಅಪರ್ಣಾ ರಾಯ್ 21 ವರ್ಷದೊಳಗಿನ ಬಾಲಕಿಯರ 100 ಮೀ. ಹರ್ಡಲ್ಸ್ನಲ್ಲಿ ನೂತನ ಕೂಟ ದಾಖಲೆಯೊಡನೆ ಚಿನ್ನ ಗೆದ್ದು ಗಮನ ಸೆಳೆದರು.ಅಥ್ಲೆಟಿಕ್ಸ್ನಲ್ಲಿ ಮೂರು ಚಿನ್ನ ಸೇರಿದಂತೆ ಕೇರಳ ಮಂಗಳವಾರ ಒಟ್ಟು ನಾಲ್ಕು ಚಿನ್ನ ಪಡೆಯಿತು.

ಸೈಕ್ಲಿಂಗ್ ಮತ್ತು ಜುಡೊದಲ್ಲಿ ಮಣಿಪುರದ ಸ್ಪರ್ಧಿಗಳು ಐದು ಚಿನ್ನ ಕಬಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.