ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್: ರಾಷ್ಟ್ರೀಯ ಶಿಬಿರಕ್ಕೆ ಮೇರಿ, ಪಂಘಾಲ್ ಇಲ್ಲ

Last Updated 9 ಡಿಸೆಂಬರ್ 2021, 19:39 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆರು ಬಾರಿಯ ವಿಶ್ವ ಚಾಂಪಿಯನ್ ಎಂ.ಸಿ. ಮೇರಿ ಕೋಮ್ ಮತ್ತು ಏಷ್ಯನ್ ಗೇಮ್ಸ್‌ ಚಿನ್ನದ ಪದಕ ವಿಜೇತ ಅಮಿತ್ ಪಂಘಾಲ್ ಅವರನ್ನು ರಾಷ್ಟ್ರೀಯ ಬಾಕ್ಸಿಂಗ್ ಶಿಬಿರಕ್ಕೆ ಆಯ್ಕೆ ಮಾಡಿಲ್ಲ.

ಇದೇ 11 ರಿಂದ ಹದಿಮೂರು ದಿನಗಳ ಶಿಬಿರವು ನಡೆಯಲಿದೆ. ಪುರುಷರ ಶಿಬಿರದಲ್ಲಿ 52 ಬಾಕ್ಸರ್‌ಗಳು ಭಾಗವಹಿಸುರು. ಪಟಿಯಾಲದ ರಾಷ್ಟ್ರೀಯ ಕ್ರೀಡಾ ಸಂಸ್ಥೆ (ಎನ್‌ಐಎಸ್)ಯಲ್ಲಿ ಶಿಬಿರ ನಡೆಯುವುದು.

ಆದರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಮನೀಷ್ ಕೌಶಿಕ್, ಆಶಿಶ್ ಚೌಧರಿ, ವಿಕಾಶ್ ಕೃಷ್ಣನ್ ಮತ್ತು ಸತೀಶ್ ಕುಮಾರ್ ಕೂಡ ಶಿಬಿರಕ್ಕೆ ಆಯ್ಕೆಯಾಗಿಲ್ಲ. ವಿಕಾಸ್ ಭುಜದ ಗಾಯದಿಂದ ಬಳಲುತ್ತಿದ್ದಾರೆ. ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ.

ಮಹಿಳೆಯರ ಶಿಬಿರವು ಹರಿಯಾಣದ ರೋಹತಕ್‌ನಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ನಡೆಯಲಿದೆ. 49 ಬಾಕ್ಸರ್‌ಗಳು ಭಾಗವಹಿಸಲಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕವಿಜೇತರಾದ ಲವ್ಲಿನಾ ಬೊರ್ಗೊಹೈನ್ (70ಕೆಜಿ), ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ನಿಖತ್ ಝರೀನ್ (52ಕೆಜಿ) ಮತ್ತು ಏಷ್ಯನ್ ಚಾಂಪಿಯನ್ ಪೂಜಾರಾಣಿ (81ಕೆಜಿ) ಶಿಬಿರದಲ್ಲಿದ್ದಾರೆ.

ಯೂತ್ ವಿಶ್ವ ಚಾಂಪಿಯನ್ ಅರುಂಧತಿ ಚೌಧರಿ ಕೂಡ ಸ್ಥಾನ ಪಡೆದಿದ್ದಾರೆ. ಆದರೆ ಮೇರಿ ಕೋಮ್ ಅವರನ್ನು ಆಯ್ಕೆ ಮಾಡಿಲ್ಲ.

ಈ ಕುರಿತು ಪ್ರತಿಕ್ರಿಯಿಸಿದ ಕೋಮ್, ‘ಸದ್ಯ ನಾನು ಮನೆಯಲ್ಲಿಯೇ ಅಭ್ಯಾಸ ಮಾಡುತ್ತಿದ್ದೇನೆ. ನಮ್ಮ ತಂಡದೊಂದಿಗೆ ಜನವರಿಯಲ್ಲಿ ಕಠಿಣ ಅಭ್ಯಾಸ ಮಾಡುತ್ತೇನೆ. ಮುಂದಿನ ವರ್ಷದ ನಡೆಯುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳುವೆ‘ ಎಂದಿದ್ದಾರೆ.

38 ವರ್ಷದ ಮೇರಿ ಕೋಮ್ ರಾಜ್ಯಸಭಾ ಸದಸ್ಯೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT