ಸುವೊನ್ (ಕೊರಿಯಾ): ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ತಾರೆ ಮೇಘನಾ ರೆಡ್ಡಿ ಅವರು ಮಂಗಳವಾರ ಕೊರಿಯಾ ಓಪನ್ ಸೂಪರ್ 500 ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಗೆಲುವು ಸಾಧಿಸಿ, ಮುಖ್ಯಸುತ್ತು ಪ್ರವೇಶಿಸಿದರು.

ತೆಲಂಗಾಣದ 21 ವರ್ಷದ ಮೇಘನಾ ಮಹಿಳೆಯರ ಸಿಂಗಲ್ಸ್ನ ಕ್ವಾಲಿಫೈಯರ್ನ ಮೊದಲ ಪಂದ್ಯದಲ್ಲಿ 21-6, 21-18ರಿಂದ ತೈವಾನ್ನ ಪೇಯ್ ಚು ಚೆನ್ ವಿರುದ್ಧ ಗೆಲುವು ಸಾಧಿಸಿದರು. ಎರಡನೇ ಪಂದ್ಯದಲ್ಲಿ ಅವರು 21-19, 22-20 ಜಪಾನ್ನ ರಿರಿನಾ ಹಿರಮೊಟೊ ಅವರನ್ನು ಹಿಮ್ಮೆಟ್ಟಿಸಿದರು. ಅವರು ಮುಖ್ಯಸುತ್ತಿನಲ್ಲಿ ಥಾಯ್ಲೆಂಡ್ನ ಟೊನ್ರುಗ್ ಸಾಹೆಂಗ್ ಅವರನ್ನು ಎದುರಿಸಲಿದ್ದಾರೆ.

ಕ್ವಾಲಿಫೈಯರ್ ಸುತ್ತಿನಲ್ಲಿ ಸ್ಪರ್ಧಿಸಿದ್ದ ಭಾರತದ ಇತರ ಆಟಗಾರರು ನಿರಾಸೆ ಮೂಡಿಸಿದರು. ಪುರುಷರ ಸಿಂಗಲ್ಸ್ನಲ್ಲಿ ಶಿವಾಂಶ್ 12-21, 21-17, 12-21ರಿಂದ ತೈವಾನ್ನ ಲು ವೀ ಹ್ಸುವಾನ್ ಅವರಿಗೆ ಮಣಿದರು.

ಪುರುಷರ ಡಬಲ್ಸ್ ಅರ್ಹತಾ ಸುತ್ತಿನಲ್ಲಿ ನಿತಿನ್ ಕುಮಾರ್ ಮತ್ತು ಹರ್ಷ್ ರಾಣಾ ಜೋಡಿಯು 11-21, 17-21 ಅಂತರದಲ್ಲಿ ತೈವಾನ್ನ ಬಾವೊ ಕ್ಸಿನ್ ಡಾ ಗು ಲಾ ಮತ್ತು ಯು ಹ್ಸಾಂಗ್ ಚೌ ವಿರುದ್ಧ ಸೋತಿತು. ಶಿವಾಂಶ್ ಮತ್ತು ಪ್ರಣವ್ ಚಾಂಡೆಲ್ ಜೋಡಿಯು 15-21, 6-21ರಿಂದ ಹಂಗ್ ಬಿಂಗ್ ಫು ಮತ್ತು ಫು ಸ್ಯುವಾನ್ ಲಿಯು ವಿರುದ್ಧ ಪರಾಭವಗೊಂಡಿತು.

ಅನುಭವಿ ಆಟಗಾರ ಎಚ್.ಎಸ್.ಪ್ರಣಯ್ ಹಾಗೂ ಉದಯೋನ್ಮುಖ ತಾರೆ ಆಯುಷ್ ಶೆಟ್ಟಿ ಅವರು ಟೂರ್ನಿಯಲ್ಲಿ ಭಾರತ ಸವಾಲನ್ನು ಮುನ್ನಡೆಸಲಿದ್ದಾರೆ. ಬುಧವಾರದಿಂದ ಮುಖ್ಯಸುತ್ತಿನ ಸ್ಪರ್ಧೆ ಆರಂಭವಾಗಲಿದೆ. ಟೂರ್ನಿಯು ಒಟ್ಟು 4 ಕೋಟಿ ಬಹುಮಾನ ಮೊತ್ತ ಒಳಗೊಂಡಿದೆ.

ಸಾತ್ವಿಕ್–ಚಿರಾಗ್ ಗೈರು: ಹಾಂಗ್ಕಾಂಗ್ ಓಪನ್ ಹಾಗೂ ಚೀನಾ ಮಾಸ್ಟರ್ಸ್ ಟೂರ್ನಿಗಳಲ್ಲಿ ಪ್ರಶಸ್ತಿ ಸುತ್ತಿಗೇರಿದ್ದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿಯು ಈ ಟೂರ್ನಿಯಲ್ಲಿ ಕಣಕ್ಕಿಳಿಯುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.