ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪದಕ ಖಚಿತಪಡಿಸಿಕೊಂಡ ಭಾರತ ತಂಡಗಳು

ಸ್ವ್ಕಾಷ್‌: ಪುರುಷ, ಮಹಿಳಾ ತಂಡಳು ಸೆಮಿಫೈನಲ್‌ಗೆ
Published 28 ಸೆಪ್ಟೆಂಬರ್ 2023, 13:50 IST
Last Updated 28 ಸೆಪ್ಟೆಂಬರ್ 2023, 13:50 IST
ಅಕ್ಷರ ಗಾತ್ರ

ಹಾಂಗ್‌ಝೌ : ಸೆಮಿಫೈನಲ್‌ಗೆ ಲಗ್ಗೆಯಿಡುವ ಮೂಲಕ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು ಏಷ್ಯನ್‌ ಗೇಮ್ಸ್‌ ಸ್ವ್ಕಾಷ್‌ ತಂಡ ವಿಭಾಗಗಳಲ್ಲಿ ಗುರುವಾರ ಪದಕ ಖಚಿತಪಡಿಸಿಕೊಂಡವು.

ಪುರುಷರ ತಂಡ ‘ಎ’ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ 3–0 ಯಿಂದ ನೇಪಾಳ ತಂಡವನ್ನು ಸೋಲಿಸಿತು. ಭಾರತ ತಂಡ ಗುಂಪಿನಲ್ಲಿ ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯಗಳಿಸಿ ಎರಡನೇ ಸ್ಥಾನ ಪಡೆಯಿತು. ಪಾಕಿಸ್ತಾನ ಅಗ್ರಸ್ಥಾನ ಪಡೆಯಿತು.

ಮಹಿಳೆಯರ ತಂಡ ‘ಬಿ’ ಗುಂಪಿನ ಕೊನೆಯ ಪಂದ್ಯದಲ್ಲಿ 0–3 ರಿಂದ ಮಲೇಷ್ಯಾ ಎದುರು ಸೋಲನುಭವಿಸಿತು. ಇದಕ್ಕೆ ಮೊದಲು ಆಡಿದ ಮೂರೂ ಪಂದ್ಯಗಳಲ್ಲಿ ಜಯಗಳಿಸಿದ್ದು ಎರಡನೇ ಸ್ಥಾನ ಪಡೆಯಿತು. ಮಲೇಷ್ಯಾ ಅಗ್ರಸ್ಥಾನ ಪಡೆಯಿತು.

ಭಾರತದ ಅನುಭವಿ ಆಟಗಾರ್ತಿ ಜ್ಯೋಷ್ನಾ ಚಿಣ್ಣಪ್ಪ6–11, 2–11, 8–11 ರಿಂದ ಮಲೇಷ್ಯಾದ ಸುಬ್ರಮಣಿಯಂ ಶಿವಸಂಗರಿ ಎದುರು 21 ನಿಮಿಷಗಳಲ್ಲಿ ಸೋತರು. ಎರಡನೇ ಪಂದ್ಯದಲ್ಲಿ ಕಾಮನ್ವೆಲ್ತ್‌ ಗೇಮ್ಸ್‌ ಸ್ವರ್ಣ ವಿಜೇತೆ ಐಫಾ ಬಿಂಟಿ ಅಝ್ಮಾನ್ ಎದುರು ಭಾರತದ ತನ್ವಿ ಖನ್ನಾ 2–1  ಮುನ್ನಡೆಯಲ್ಲಿದ್ದರೂ ಅದನ್ನು ಬಳಸಿಕೊಳ್ಳಲಿಲ್ಲ. ಐಫಾ ಅಂತಿಮವಾಗಿ 9–11, 11–1, 7–11, 13–11, 11–5 ರಿಂದ ಜಯಗಳಿಸಿದರು. ಇನ್ನೊಂದು ಪಂದ್ಯದಲ್ಲಿ 15 ವರ್ಷದ ಅನಾಹತ್ ಸಿಂಗ್ ನೇರ ಆಟಗಳಿಂದ (7–11, 7–11, 12–14) ಮಲೇಷ್ಯಾದ ರಚೆಲ್ ಮೇ ಅರ್ನಾಲ್ಡ್‌ ಎದುರು ಸೋತರು.

ಪುರುಷರ ವಿಭಾಗದಲ್ಲಿ ಅಭಯ್ ಸಿಂಗ್ 11–2, 11–4, 11–1 ರಿಂದ ಅಮೃತ್ ಥಾಪಾ ಅವರನ್ನು 17 ನಿಮಿಷಗಳಲ್ಲಿ ಸೋಲಿಸಿದರು. ಮಹೇಶ್ ಮಂಗಾವಕರ್ 11–2, 11–3, 11–3 ರಿಂದ ಅರಹಂತ್ ಕೇಸರ್ ಸಿಂಹ ಅವರನ್ನು, ಹರಿಂದರ್ ಪಾಲ್ ಸಿಂಗ್ ಸಂಧು 11–1, 11–2, 11–6 ರಿಂದ ಅಮಿರ್ ಅವರನ್ನು ಸುಲಭವಾಗಿ ಮಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT