ಲಂಡನ್: ವಿಶ್ವ ರ್ಯಾಪಿಡ್ ಚೆಸ್ ಟೀಮ್ ಚಾಂಪಿಯನ್ಷಿಪ್ ಗೆದ್ದುಕೊಂಡ ಭಾರತದ ಮೊದಲ ತಂಡ ಎನಿಸಿದ ಮರುದಿನವೇ, ಎಂಜಿಡಿ1 ತಂಡ ಮತ್ತೊಂದು ಅಧಿಕಾರಯುತ ಪ್ರದರ್ಶನದೊಡನೆ ‘ಬ್ಲಿಟ್ಝ್’ ಟೀಮ್ ಟೂರ್ನಿಯ ನಾಕೌಟ್ ಹಂತ ತಲುಪಿತು. ಈಗ ತಂಡದ ಮುಂದೆ ‘ಚಿನ್ನದ ಡಬಲ್’ ಸಾಧಿಸುವ ಅವಕಾಶ ಇದೆ.

ನಾಲ್ಕು ಗುಂಪುಗಳಿಂದ 16 ತಂಡಗಳು ಭಾನುವಾರ ನಾಕೌಟ್ಗೆ ತಲುಪಿವೆ. ‘ಡಿ’ ಗುಂಪಿನಲ್ಲಿದ್ದ ಎಂಜಿಡಿ1 ತಂಡ, ಹಂಗೆರಿ ಎದುರು ಡ್ರಾ ಮಾಡಿಕೊಂಡು, ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದುಕೊಂಡು 23 ಮ್ಯಾಚ್ ಪಾಯಿಂಟ್ಸ್ ಸಂಗ್ರಹಿಸಿತು. 53 ತಂಡಗಳು ರೌಂಡ್ ರಾಬಿನ್ ಮಾದರಿಯ ಗುಂಪು ಹಂತದಲ್ಲಿ ಭಾಗವಹಿಸಿದ್ದು ಪ್ರತಿ ಗುಂಪಿನಲ್ಲಿ ಮೊದಲ ನಾಲ್ಕು ತಂಡ ಪಡೆದ ತಂಡಗಳು ಪ್ರಿಕ್ವಾರ್ಟರ್ಫೈನಲ್ ತಲುಪಿವೆ.

ಗ್ರ್ಯಾಂಡ್ಮಾಸ್ಟರ್ಗಳಾದ ಅರ್ಜುನ್ ಇರಿಗೇಶಿ, ಪಿ.ಹರಿಕೃಷ್ಣ, ವಿ.ಪ್ರಣವ್, ಲಿಯಾನ್ ಲೂಕ್ ಮೆಂಡೊನ್ಸಾ ಜೊತೆಗೆ ಸ್ಟಾವ್ರೊಲಾ ಸೊಲಕಿಡೊ ಮತ್ತು ಅಥರ್ವ ತಾಯಡೆ ಅವರನ್ನು ಒಳಗೊಂಡ ಎಂಜಿಡಿ1 ತಂಡವು ಐದು ಪಂದ್ಯಗಳಲ್ಲಿ ಜಯ ಸಾಧಿಸಿತು. ಇದು ಅರ್ಹತೆ ಪಡೆದ 16 ತಂಡಗಳಲ್ಲಿ ಅತಿ ಹೆಚ್ಚು.

ತಂಡದ ಅಗ್ರ ಆಟಗಾರ ಇರಿಗೇಶಿ 13 ಪಂದ್ಯಗಳಲ್ಲಿ 11 ಗೆದ್ದುಕೊಂಡು ಅತ್ಯುತ್ತಮ ಸಾಧನೆ ದಾಖಲಿಸಿದರು.

ಕಾಝ್ ಚೆಸ್ ತಂಡ ಡಿ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯಿತು. ಈ ತಂಡದಲ್ಲಿ ಹವ್ಯಾಸಿ ಆಟಗಾರ ಇಸ್ಲಾಂ ಐತೆನ್ ಅತಿ ಹೆಚ್ಚಿನ ಕಾಣಿಕೆ (13 ಪಂದ್ಯಗಳಿಂದ 12 ಪಾಯಿಂಟ್) ನೀಡಿದರು.

ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರನ್ನು ಒಳಗೊಂಡ ಫ್ರೀಡಂ ತಂಡ 22 ಪಾಯಿಂಟ್ಸ್ ಸಂಗ್ರಹಿಸಿ ಬಿ ಗುಂಪಿನಲ್ಲಿ ಹೆಕ್ಸಾಮಿಡ್ ಜೊತೆ ಜಂಟಿ ಅಗ್ರಸ್ಥಾನ ಪಡೆಯಿತು.

ಬ್ಲಿಟ್ಝ್ ಟೂರ್ನಿಯು ಸುಮಾರು ₹1.90 ಕೋಟಿ ಬಹುಮಾನ ಮೊತ್ತ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.