ಟೋಕಿಯೊ: ಒಲಂಪಿಕ್ಸ್ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಡುವುದು ಸಾಧ್ಯವಾದದ್ದಕ್ಕೆ ಮೀರಾಬಾಯಿ ಚಾನು ಸಂಭ್ರಮ ವ್ಯಕ್ತಪಡಿಸಿದ್ದಾರೆ.

ನನ್ನ ದೇಶಕ್ಕಾಗಿ ಬೆಳ್ಳಿ ಪದಕ ಗೆದ್ದಿರುವುದು ಬಹಳ ಸಂತಸ ತಂದಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಓದಿ:ವೇಟ್ಲಿಫ್ಟಿಂಗ್ನಲ್ಲಿ ಬೆಳ್ಳಿ ಪದಕ: ಮೀರಾಬಾಯಿ ಚಾನುಗೆ ಅಭಿನಂದನೆಗಳ ಮಹಾಪೂರ

‘ನನ್ನ ಕನಸು ನನಸಾಯಿತು. ಈ ಪಯಣದಲ್ಲಿ ಕೋಟ್ಯಂತರ ಭಾರತೀಯರ ಪ್ರಾರ್ಥನೆಗಳು ನನ್ನ ಜತೆಗಿದ್ದವು. ಅವರೆಲ್ಲರಿಗೆ ಹಾಗೂ ದೇಶಕ್ಕೆ ಈ ಪದಕವನ್ನು ಅರ್ಪಿಸುತ್ತಿದ್ದೇನೆ. ನನ್ನ ಕುಟುಂಬದವರಿಗೆ, ಅದರಲ್ಲೂ ನನಗಾಗಿ ಅನೇಕ ತ್ಯಾಗಗಳನ್ನು ಮಾಡಿ ನನ್ನ ಮೇಲೆ ನಂಬಿಕೆ ಇರಿಸಿದ ತಾಯಿಗೆ ವಿಶೇಷ ಕೃತಜ್ಞತೆಗಳು. ನನಗೆ ನಿರಂತರವಾಗಿ ಬೆಂಬಲ ನೀಡಿದ ಸರ್ಕಾರ, ಕ್ರೀಡಾ ಸಚಿವಾಲಯ, ಭಾರತೀಯ ಕ್ರೀಡಾ ಪ್ರಾಧಿಕಾರ, ಐಒಎ, ಭಾರತೀಯ ವೇಟ್ಲಿಫ್ಟಿಂಗ್ ಒಕ್ಕೂಟ, ರೈಲ್ವೇಸ್, ಪ್ರಾಯೋಜಕತ್ವ ವಹಿಸಿಕೊಂಡವರು, ಮಾರ್ಕೆಟಿಂಗ್ ಏಜೆನ್ಸಿ ಐಒಎಸ್ ಸಂಸ್ಥೆಗಳಿಗೆ ಧನ್ಯವಾದಗಳು. ಕಠಿಣ ಪರಿಶ್ರಮ, ಪ್ರೋತ್ಸಾಹ ಮತ್ತು ತರಬೇತಿ ನೀಡಿದ ಕೋಚ್ ವಿಜಯ್ ಶರ್ಮಾ ಹಾಗೂ ಸಹಾಯಕ ಸಿಬ್ಬಂದಿಗೂ ವಿಶೇಷ ಧನ್ಯವಾದಗಳು. ವೇಟ್ಲಿಫ್ಟಿಂಗ್ ವಿಭಾಗದ ಎಲ್ಲ ಸಹೋದರ–ಸಹೋದರಿಯರು ಮತ್ತು ದೇಶದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು. ಜೈ ಹಿಂದ್’ ಎಂದು ಚಾನು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.

49 ಕೆ.ಜಿ ವೇಟ್ಲಿಫ್ಟಿಂಗ್ ವಿಭಾಗದಲ್ಲಿ ಶನಿವಾರ ಮೀರಾಬಾಯಿ ಬೆಳ್ಳಿ ಪದಕ ಗೆದ್ದಿದ್ದು, ಇದರೊಂದಿಗೆ ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತದ ಪದಕ ಬೇಟೆ ಆರಂಭವಾಗಿದೆ.

ಓದಿ:Tokyo Olympics | ಭಾರತಕ್ಕೆ ಮೊದಲ ಪದಕ; ಬೆಳ್ಳಿ ಗೆದ್ದ ಮೀರಾಬಾಯಿ ಚಾನು

ಇನ್ನಷ್ಟು...

Olympics: ಕರ್ಣಂ ಮಲ್ಲೇಶ್ವರಿ ಹಾದಿಯಲ್ಲಿ ಅರಳಿದ ಮತ್ತೊಂದು ಹೂ ಮೀರಾಬಾಯಿ ಚಾನು

Tokyo Olympics | ಕರ್ಣಂ ಮೀರಿದ ಮೀರಾ: ಎರಡು ದಶಕದ ಬಳಿಕ ವೇಟ್ಲಿಫ್ಟಿಂಗ್ನಲ್ಲಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.