ಗಾಡಾಲ್ಜಾರ್, ಮೆಕ್ಸಿಕೊ (ಎಪಿ): ಸ್ಪೇನ್‌ನ ಗಾರ್ಬೈನ್ ಮುಗುರುಜಾ ಡಬ್ಲ್ಯುಟಿಎ ಫೈನಲ್ ಪ್ರಶಸ್ತಿಯನ್ನು ಜಯಿಸಿದರು.

28 ವರ್ಷದ ಮುಗುರುಜಾ ಅವರಿಗೆ ಇದು ಮೊದಲ ಪ್ರಶಸ್ತಿಯಾಗಿದೆ. ಅವರು 6–3, 7–5ರಿಂದ ಎಸ್ತೋನಿಯಾದ ಅನೆಟ್ ಕೋಂಥಾವಿಟ್ ವಿರುದ್ಧ ಗೆದ್ದರು.

‘ಟೂರ್ನಿಗೂ ಮುನ್ನ ಟಕಿಲಾಗೆ ಹೋಗಿದ್ದೆ. ಅಲ್ಲಿಯ ಸುಪ್ರಸಿದ್ಧ ಮದ್ಯವನ್ನು ರುಚಿ ನೋಡಿ ಬಂದಿದ್ದೆ. ಇಲ್ಲಿ ಪ್ರಶಸ್ತಿ ಜಯಿಸಿದ ನಂತರ ಮತ್ತೆ ಟಕಿಲಾಗೆ ಹೋಗಿ ಔತಣಕೂಟ ಮಾಡುವುದು ಖಚಿತವೆಂದು ನನಗೆ ಗೊತ್ತಿತ್ತು’ ಎಂದು ಮುಗುರುಜಾ ಸಂತಸ ಹಂಚಿಕೊಂಡರು. ಟೂರ್ನಿ ನಡೆದ ಸ್ಥಳದಿಂದ 60 ಕಿಲೋಮೀಟರ್ಸ್ ದೂರದಲ್ಲಿರುವ ಪಟ್ಟಣ ಟಕೀಲಾ.

2015ರಲ್ಲಿ ಮುಗುರುಜಾ ಅವರು ಡಬ್ಲ್ಯುಟಿಎ ಸೆಮಿಫೈನಲ್ ಪ್ರವೇಶಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.