ಡೆಹ್ರಾಡೂನ್ (ಪಿಟಿಐ): ಹರಿಯಾಣ, ರಾಷ್ಟ್ರೀಯ ಕ್ರೀಡೆಗಳ ಪುರುಷರ ಮತ್ತು ಮಹಿಳೆಯರ ಆರ್ಚರಿ ಟೀಮ್ ಇಂಡಿಯನ್ ರೌಂಡ್ ತಂಡ ವಿಭಾಗದಲ್ಲಿ ಮೇಲುಗೈ ಸಾಧಿಸಿ ಶುಕ್ರವಾರ ಎರಡು ಚಿನ್ನಗಳನ್ನು ಗೆದ್ದುಕೊಂಡಿತು.

ಯಶು, ಆಶಿಷ್ ಮಲಿಕ್, ರಾಹುಲ್ ಮತ್ತು ರವಿ ಅವರನ್ನೊ ಳಗೊಂಡ ಹರಿಯಾಣ ಪುರುಷರ ತಂಡ ಚಿನ್ನ ಗೆದ್ದಿತು.

ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ತನ್ನದಾಗಿಸಿಕೊಂಡಿತು.

ಮಹಿಳೆಯರ ವಿಭಾಗದಲ್ಲೂ ಹರಿಯಾಣ (ನಿಕಿತಾ, ದಿವ್ಯಾ, ಮೋನಿಕಾ ಮತ್ತು ಕಾಜಲ್) ಚಿನ್ನ ಜಯಿಸಿತು. ಮಣಿಪುರ ಮತ್ತು ಛತ್ತೀಸಗಢ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದುಕೊಂಡಿತು.

ಉತ್ತರ ಪ್ರದೇಶದ ಮನಿಷ್ ಅವರು ಪುರುಷರ ವೈಯಕ್ತಿಕ ಚಿನ್ನ ಗೆದ್ದರೆ, ಮಹಿಳೆಯರ ವಿಭಾಗದ ಸ್ವರ್ಣ ಪದಕ ಮಣಿಪುರದ ಲೈಫ್ರಾಕಮ್ ರೋಜಿನಾ ದೇವಿ ಪಾಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.