ನವದೆಹಲಿ: ಪೋಲೆಂಡ್ನ ಸಿಲೆಸಿಯಾದಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಸ್ಪರ್ಧಿಗಳ ಪ್ರವೇಶ ಪಟ್ಟಿಯಿಂದ ಭಾರತದ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಮತ್ತು ಪಾಕಿಸ್ತಾನದ ಅರ್ಷದ್ ನದೀಂ ಅವರ ಹೆಸರುಗಳು ಕಣ್ಮರೆಯಾಗಿವೆ!

ಭಾರತ ಮತ್ತು ಪಾಕಿಸ್ತಾನದ ಇಬ್ಬರು ತಾರೆಗಳು ದೀರ್ಘ ಕಾಲದ ನಂತರ ಮುಖಾಮುಖಿಯಾಗುವ ಸ್ಪರ್ಧೆ ಇದಾಗಿದೆ. ಆಗಸ್ಟ್ 16ರಂದು ಲೀಗ್ ನಡೆಯಲಿದೆ.

ಸಿಲೆಸಿಯಾ ಡೈಮಂಡ್ ಲೀಗ್ ಆಯೋಜಕರು ಜುಲೈ 9ರಂದು ನೀಡಿದ್ದ ಪ್ರಕಟಣೆಯಲ್ಲಿ ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಮತ್ತು ಪ್ಯಾರಿಸ್ ಒಲಿಂಪಿಕ್ಸ್ ಚಾಂಪಿಯನ್ ಅರ್ಷದ್ ಅವರು ಸ್ಪರ್ಧಿಸುವುದನ್ನು ಖಚಿತಗೊಳಿಸಿದ್ದರು. ಹೋದ ತಿಂಗಳಷ್ಠೇ ನದೀಮ್ ಅವರು ತಮ್ಮ ಮೀನಖಂಡದ ಗಾಯಕ್ಕೆ ಇಂಗ್ಲೆಂಡ್ನಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಆದ್ದರಿಂದ ಅವರು ಈ ಲೀಗ್ನಲ್ಲಿ ಕಣಕ್ಕಿಳಿಯುವುದು ಅನುಮಾನವಾಗಿತ್ತು.

ಖ್ಯಾತನಾಮ ಅಥ್ಲೀಟ್ಗಳಾದ ಜರ್ಮನಿಯ ಜೂಲಿಯನ್ ವೆಬರ್, ಗ್ರೆನಡಾದ ಆ್ಯಂಡರ್ಸನ್ ಪೀಟರ್ಸ್, ಕೆನ್ಯಾದ ಜೂಲಿಯಸ್ ಯೆಗೊ, ಟ್ರಿನಿಡಾಡ್–ಟೊಬ್ಯಾಗೊದ ಕೆಶೋರ್ನ್ ವಾಲ್ಕಾಟ್, ಜಪಾನಿನ ಡೀನ್ ಡಾಡೆರಿಕ್ ಜೆಂಕಿ, ಮಾಲ್ಡೋವಾದ ಆಂಡ್ರಿಯಾನ್ ಮಾರ್ಡರೆ ಮತ್ತು ಪೋಲೆಂಡ್ನ ಮೆರಿಗೋಲ್ಡ್ ಸೈಪ್ರಿಯಾನ್ ಅವರು ಸಿಲೆಸಿಯಾದ ಕಣದಲ್ಲಿದ್ದಾರೆ.

ಕಳೆದ ಎರಡು ಡೈಮಂಡ್ ಲೀಗ್ ಆವೃತ್ತಿಗಳಲ್ಲಿ ಸ್ಪರ್ಧಿಸಿದ್ದ ಚೋಪ್ರಾ ಅವರು ಒಟ್ಟು 15 ಅಂಕ ಗಳಿಸಿದ್ದಾರೆ. ವೇಬರ್ ಅವರೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಆ್ಯಂಡರ್ಸನ್ ಮತ್ತು ವಾಲ್ಕಾಟ್ ಅವರು ತಲಾ 10 ಅಂಕ ಗಳಿಸಿದ್ದಾರೆ. ಆಗಸ್ಟ್ 22ರಂದು ಬ್ರಸೆಲ್ಸ್ನಲ್ಲಿ ಆವೃತ್ತಿ ಮತ್ತು 28ರಂದು ಜ್ಯೂರಿಚ್ನಲ್ಲಿ ಫೈನಲ್ಸ್ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.