ನವದೆಹಲಿ (ಪಿಟಿಐ): ಭಾರತ ಅಥ್ಲೆಟಿಕ್ ಸಂಸ್ಥೆ (ಎಎಫ್‌ಐ) ಮತ್ತು ಫಿಟ್ ಇಂಡಿಯಾ ರೇಸ್ ಸಹಯೋಗದಲ್ಲಿ ಫೆ.26ರಂದು ನಡೆಯಲಿರುವ ನವದೆಹಲಿ ಮ್ಯಾರಥಾನ್‌ನಲ್ಲಿ ಭಾರತದ ಪ್ರಮುಖ ಅಥ್ಲೀಟ್‌ಗಳು ಪಾಲ್ಗೊಳ್ಳಲಿದ್ದಾರೆ.

ಹಾಂಗ್‌ಜೌ ಏಷ್ಯನ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯುವ ಗುರಿಯೊಂದಿಗೆ ಪುರುಷರ, ಮಹಿಳೆಯರ ವಿಭಾಗಗಳಲ್ಲಿ ಸ್ಪರ್ಧಿಗಳು ಕಣಕ್ಕಿಳಿಯಲಿದ್ದಾರೆ.

‘ನವದೆಹಲಿ ಮ್ಯಾರಥಾನ್‌ನಲ್ಲಿ ಅಥ್ಲೀಟ್‌ಗಳು ನೀಡುವ ಪ್ರದರ್ಶನವನ್ನು, ಏಷ್ಯನ್ ಕ್ರೀಡಾಕೂಟದ ಆಯ್ಕೆಗೆ ಪರಿಗಣಿಸಲಾಗುವುದು. ಪುರುಷರ ವಿಭಾಗದಲ್ಲಿ 2 ಗಂಟೆ 15 ನಿ. ಹಾಗೂ ಮಹಿಳೆಯರ ವಿಭಾಗದಲ್ಲಿ 2 ಗಂಟೆ 37 ನಿಮಿಷವನ್ನು ಅರ್ಹತಾ ಸಮಯವಾಗಿ ನಿಗದಿಪಡಿಸಲಾಗಿದೆ’ ಎಂದು ಎಎಫ್‌ಐ ತಿಳಿಸಿದೆ.

ಎಲೈಟ್ ವಿಭಾಗದಲ್ಲಿ ಎಲ್ಲರಿಗೂ ಪಾಲ್ಗೊಳ್ಳಲು ಅವಕಾಶವಿಲ್ಲ. ಪುರುಷರ ವಿಭಾಗದಲ್ಲಿ 2 ಗಂಟೆ 40 ನಿ.ಹಾಗೂ ಮಹಿಳೆಯರ ವಿಭಾಗದಲ್ಲಿ 3 ಗಂಟೆ 10 ನಿ. ಸಮಯ ಕಂಡುಕೊಂಡಿರುವ ಅಥ್ಲೀಟ್‌ಗಳು ಪಾಲ್ಗೊಳ್ಳಬಹುದು.

‘ಮ್ಯಾರಥಾನ್, ಹಾಫ್ ಮ್ಯಾರಥಾನ್ 10 ಮತ್ತು 5 ಕಿ.ಮೀ. ಓಟ– ಹೀಗೆ ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಈ ಬಾರಿಯ 16 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ’ ಎಂದು ಸಂಘಟಕರಾದ ಎನ್‌ಇಬಿ ಸ್ಪೋರ್ಟ್ಸ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.