ನವದೆಹಲಿ: ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತ ಜಾವೆಲಿನ್ ಥ್ರೋ ಆಟಗಾರ ನೀರಜ್ ಚೋಪ್ರಾ ಅವರು ಸರ್ಕಾರದ ‘ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್’ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

‘ದೈಹಿಕ ಸಾಮರ್ಥ್ಯ ಹೆಚ್ಚಿಸುವುದರ ಜತೆಗೆ ಮಾಲಿನ್ಯ ನಿಯಂತ್ರಣಕ್ಕೂ ಇದು ನೆರವಾಗಲಿದೆ. ಪ್ರತಿದಿನ ಸೈಕಲ್ ತುಳಿಯಲು ಸಾಧ್ಯವಾಗದವರು ಪ್ರತಿ ಭಾನುವಾರವಾದರೂ ಸೈಕಲ್ ಜಾಥಾದಲ್ಲಿ ಪಾಲ್ಗೊಳ್ಳಬೇಕು’ ಎಂದಿದ್ದಾರೆ.

‘ಈ ಸೈಕಲ್ ಜಾಥಾಗೆ ಡಿ. 17ರಂದು ಚಾಲನೆ ದೊರೆಯಿತು. ಕ್ರೀಡಾ ಸಚಿವ ಮನ್ಸುಕ್ ಮಾಂಡಾವಿಯಾ ಅವರು ಚಾಲನೆ ನೀಡಿದರು. ‘ಫಿಟ್ನೆಸ್ಕ ಡೋಸ್, ಆದಾ ಗಂಟಾ ರೋಜ್‘ (ಪ್ರತಿನಿತ್ಯ ಅರ್ಧ ಗಂಟೆ ಫಿಟ್ನೆಸ್ ಡೋಸ್) ಎಂಬ ಧ್ಯೇಯವಾಕ್ಯದೊಂದಿಗೆ ಇದನ್ನು ಆರಂಭಿಸಲಾಗಿತ್ತು. ಜತೆಗೆ ಸ್ಥೂಲಕಾಯದ ವಿರುದ್ಧದ ಹೋರಾಟವೂ ಇದಾಗಿದೆ’ ಎಂದಿದ್ದರು.

ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್ ಜಾಥಾವು ಈವರೆಗೂ ರಾಷ್ಟ್ರವ್ಯಾಪಿ 4,200ಕ್ಕೂ ಅಧಿಕ ಸ್ಥಳಗಳಲ್ಲಿ ಆಯೋಜಿಸಲಾಗುತ್ತಿದೆ. ಸುಮಾರು 2 ಲಕ್ಷ ಜನರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಕ್ರೀಡಾ ಇಲಾಖೆ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.