ಮೈಸೂರು: ಜಿಲ್ಲೆಯ ಕೆ.ಆರ್. ನಗರದ ಕೆ.ಎಸ್. ಶಿಲ್ಪಾ ಬುಧವಾರ ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ 33ನೇ ಹಿರಿಯರ ರಾಜ್ಯ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್ಷಿಪ್ನ ಮಹಿಳೆಯರ ವಿಭಾಗದ ಶಾಟ್ಪಟ್ ಹಾಗೂ ಡಿಸ್ಕಸ್ ಥ್ರೋನಲ್ಲಿ ಚಿನ್ನದ ಸಾಧನೆ ಮಾಡಿದರು.

ಎಫ್–56 ವಿಭಾಗದ ಸ್ಪರ್ಧೆಯಲ್ಲಿ ಪಾಲ್ಗೊಂಡ ಅವರು 6.1 ಮೀಟರ್ ದೂರಕ್ಕೆ ಶಾಟ್ಪಟ್ ಎಸೆಯುವ ಮೂಲಕ ಮೊದಲ ಸ್ಥಾನ ಗಳಿಸಿದರು. ಆನೇಕಲ್ನ ರೇಣುಕಾ 4.91 ಮೀಟರ್ ದೂರಕ್ಕೆ ಎಸೆದು ದ್ವಿತೀಯ ಸ್ಥಾನ ಪಡೆದರು.

ಪುರುಷರ ಟಿ–42 ವಿಭಾಗದ ಹೈಜಂಪ್ನಲ್ಲಿ ಹಾಸನದ ಎಚ್.ಎಸ್. ರಕ್ಷಿತ್ 1.70 ಮೀಟರ್ ಎತ್ತರಕ್ಕೆ ಜಿಗಿಯುವ ಮೂಲಕ ಮೊದಲ ಸ್ಥಾನ ಪಡೆದರೆ, ಚಾಮರಾಜನಗರದ ಎನ್. ಮನೋಜ್ (1.65 ಮೀಟರ್) ದ್ವಿತೀಯ ಸ್ಥಾನ ಪಡೆದರು.

ಕರ್ನಾಟಕ ರಾಜ್ಯ ಅಂಗವಿಕಲರ ಕ್ರೀಡಾ ಸಂಸ್ಥೆ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 240 ಮಹಿಳೆಯರು ಸೇರಿದಂತೆ 680 ಸ್ಪರ್ಧಿಗಳು ಪಾಲ್ಗೊಂಡರು. ಅಂಗವಿಕಲರು,
ವಿಶೇಷ ವ್ಯಕ್ತಿಗಳು, ಅಸ್ವಸ್ಥರು, ನರದೌರ್ಬಲ್ಯ ಸಮಸ್ಯೆ ಉಳ್ಳವರು, ದೃಷ್ಟಿದೋಷವುಳ್ಳವರಿಗಾಗಿ ಪ್ರತ್ಯೇಕ ಸ್ಪರ್ಧೆಗಳು ನಡೆದವು. ಒಟ್ಟು 72 ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ದೈಹಿಕ ನ್ಯೂನತೆಯನ್ನು ಮರೆತು ಸ್ಪರ್ಧಿಗಳು ಉತ್ಸಾಹದಿಂದ ಪಾಲ್ಗೊಂಡರು.

ಚೆನ್ನೈನಲ್ಲಿ ಫೆ.17ರಿಂದ 20ರವರೆಗೆ 23ನೇ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್ಷಿಪ್ ನಡೆಯಲಿದ್ದು, ಟೂರ್ನಿಗಾಗಿ ಕರ್ನಾಟಕ ತಂಡವನ್ನು ಈ ಸಂದರ್ಭ ಆಯ್ಕೆ ಮಾಡಲಾಯಿತು. ಭಾರತೀಯ ಪ್ಯಾರಾಲಿಂಪಿಕ್ ಸಮಿತಿ ನಿಯಮಾನುಸಾರ ಆಯ್ಕೆ ಪ್ರಕ್ರಿಯೆ ನಡೆಯಿತು.

‘ಕಳೆದ ವರ್ಷ ತುಮಕೂರಿನಲ್ಲಿ ನಡೆದ ಚಾಂಪಿಯನ್ಷಿಪ್ ಹಾಗೂ ಆಯ್ಕೆ ಪ್ರಕ್ರಿಯೆಯಲ್ಲಿ ಸುಮಾರು 350 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಇದೇ ಮೊದಲ ಬಾರಿಗೆ ಈ ಸಂಖ್ಯೆಯಲ್ಲಿ ಅಂಗವಿಕಲ ಸ್ಪರ್ಧಿಗಳು ಭಾಗವಹಿಸಿದ್ದಾರೆ’ ಎಂದು ಸಂಸ್ಥೆಯ ರಾಜ್ಯ ಕಾರ್ಯದರ್ಶಿ ಎಸ್.ಜಿ. ರಾಘವೇಂದ್ರ ಹಾಗೂ ಉಪಾಧ್ಯಕ್ಷ ಆರ್. ರಾಮಚಂದ್ರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.