ಒಂದು ಹಂತದಲ್ಲಿ, 90 ಸೆಕೆಂಡುಗಳು ಉಳಿದಿರುವಾಗ ಅವರು 8–1ರಿಂದ ಮುಂದಿದ್ದರು. ಆದರೆ ಈ ವೇಳೆ ಬಲಗೈಗೆ ಆದ ತೀವ್ರ ನೋವಿನಿಂದ ಕಷ್ಟಪಟ್ಟು ಹೋರಾಟ ಮುಂದುವರಿಸಿದರು. 10 ಸೆಕೆಂಡುಗಳಿದ್ದಾಗ ಸ್ಕೋರ್ 8–8ರಲ್ಲಿ ಸಮನಾಗಿತ್ತು. ಆದರೆ ನಂತರದ ಅತ್ಯಲ್ಪ ಅವಧಿಯಲ್ಲಿ ಉತ್ತರ ಕೊರಿಯಾ ಸ್ಪರ್ಧಿ ಮೇಲುಗೈ ಸಾಧಿಸಿ ಗೆಲುವು ತಮ್ಮದಾಗಿಸಿಕೊಂಡರು. ಕೊನೆಕೊನೆಯಲ್ಲಿ ನಿಶಾ ಹೋರಾಟ ನೀಡುವ ಸ್ಥಿತಿಯಲ್ಲಿರಲಿಲ್ಲ.