ಪ್ಯಾರಿಸ್: ಝೆಂಗ್ ಕ್ವಿನ್‌ವೆನ್ ಒಲಿಂಪಿಕ್ಸ್‌ನ ಟೆನಿಸ್ ಮಹಿಳಾ ಸಿಂಗಲ್ಸ್‌ನಲ್ಲಿ ಚಾಂಪಿಯನ್ ಆದರು. ಈ ಮೂಲಕ ಸಿಂಗಲ್ಸ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಚೀನಾದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾದರು.
ವಿಶ್ವ ರ‍್ಯಾಂಕಿಂಗ್‌ನಲ್ಲಿ ಏಳನೇ ಸ್ಥಾನದಲ್ಲಿರುವ 21 ವರ್ಷ ವಯಸ್ಸಿನ ಝೆಂಗ್ ಅವರು ಶನಿವಾರ ನಡೆದ ಫೈನಲ್‌ನಲ್ಲಿ 6–2, 6–3ರಿಂದ ಕ್ರೊವೇಷ್ಯಾದ ಡೋನಾ ವೆಕಿಚ್ ಅವರನ್ನು ಸುಲಭವಾಗಿ ಮಣಿಸಿದರು. ಅವರು ಈ ವರ್ಷ ಆಸ್ಟ್ರೇಲಿಯಾ ಓಪನ್‌ನಲ್ಲಿ ರನ್ನರ್ ಅಪ್ ಆಗಿದ್ದರು. ಟೆನಿಸ್‌ನಲ್ಲಿ ಚೀನಾಕ್ಕೆ ದಕ್ಕಿದ ಎರಡನೇ ಚಿನ್ನದ ಪದಕ ಇದಾಗಿದೆ. 2004ರ ಅಥೆನ್ಸ್ ಕೂಟದಲ್ಲಿ ಮಹಿಳೆಯರ ಡಬಲ್ಸ್‌ನಲ್ಲಿ (ಲಿ ಟಿಂಗ್ ಮತ್ತು ಸನ್ ಟಿಯಾಂಟಿಯನ್) ಮೊದಲ ಸ್ವರ್ಣ ಜಯಿಸಿತ್ತು.