ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಇಡೀ ಜಗತ್ತನ್ನೇ ಗೆಲ್ಲಲು ಹೊರಟ ವಿನೇಶಾಗೆ ಈ ದೇಶದ ವ್ಯವಸ್ಥೆಯಲ್ಲಿ ಸೋಲು: ಬಜರಂಗ್

Published 6 ಆಗಸ್ಟ್ 2024, 14:13 IST
Last Updated 6 ಆಗಸ್ಟ್ 2024, 14:13 IST
ಅಕ್ಷರ ಗಾತ್ರ

ನವದೆಹಲಿ: ಇಡೀ ಜಗತನ್ನೇ ಗೆಲ್ಲಲು ಹೊರಟಿರುವ ಕುಸ್ತಿಪಟು ವಿನೇಶಾ ಫೋಗಾಟ್ ಅವರು ತನ್ನದೇ ದೇಶದಲ್ಲಿ ಸೋಲು ಎದುರಿಸಿದ್ದಳು ಎಂದು ಕುಸ್ತಿಪಟು ಬಜರಂಗ್ ಪೂನಿಯಾ ಹೇಳಿದ್ದಾರೆ.

ಈ ಕುರಿತು ಬಜರಂಗ್, ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿದ್ದು, ವಿನೇಶಾ ಫೋಗಾಟ್ ಅವರನ್ನು 'ಭಾರತದ ಸಿಂಹಿಣಿ' ಎಂದು ವ್ಯಾಖ್ಯಾನಿಸಿದ್ದಾರೆ.

'ವಿನೇಶಾ ಅವರು ನಾಲ್ಕು ಬಾರಿಯ ವಿಶ್ವ ಚಾಂಪಿಯನ್, ಒಲಿಂಪಿಕ್ಸ್ ವಿಜೇತೆ ಜಪಾನಿನ ಯುಇ ಸುಸಾಕಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಅದಾದ ಬಳಿಕ ಮಾಜಿ ವಿಶ್ವ ಚಾಂಪಿಯನ್ ಉಕ್ರೇನ್‌ನ ಸ್ಪರ್ಧಿಯ ವಿರುದ್ಧ ಜಯ ಗಳಿಸಿದ್ದಾರೆ' ಎಂದು ಅವರು ತಿಳಿಸಿದ್ದಾರೆ.

'ಆದರೆ ನಿಮಗೊಂದು ವಿಷಯ ಹೇಳಲು ಬಯಸುತ್ತೇನೆ. ಈ ಹುಡುಗಿಯನ್ನು ತನ್ನದೇ ದೇಶದಲ್ಲಿ ಲಾಠಿಯಿಂದ ಹೊಡೆದು ದಮನಿಸಲಾಯಿತು. ಈ ಹುಡುಗಿಯನ್ನು ತನ್ನದೇ ದೇಶದಲ್ಲಿ ಬೀದಿಯಲ್ಲಿ ಎಳೆದಾಡಲಾಯಿತು. ಈ ಹುಡುಗಿ ಇಡೀ ಜಗತ್ತನ್ನು ಗೆಲ್ಲಲು ಹೊರಟಿದ್ದಾಳೆ. ಆದರೆ ಈ ದೇಶದ ವ್ಯವಸ್ಥೆಯಲ್ಲಿ ಸೋತಿದ್ದಾಳೆ' ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ಕುಸ್ತಿ ಅಖಾಡದಲ್ಲಿ ಭಾರತದ ಪದಕದ ಕನಸು ಹೊತ್ತುಕೊಂಡಿರುವ, ವಿನೇಶಾ ಫೋಗಾಟ್ ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಇನ್ನೊಂದು ಪಂದ್ಯ ಗೆದ್ದರೆ ಪದಕ ಗೆಲ್ಲಲಿದ್ದಾರೆ. ಒಟ್ಟಾರೆಯಾಗಿ ವಿನೇಶಾ ಫೋಗಾಟ್ ಅವರಿಗೆ ಇದು ಮೂರನೇ ಒಲಿಂಪಿಕ್ ಕೂಟವಾಗಿದೆ.

ಇದಕ್ಕೂ ಮಿಗಿಲಾಗಿ ಕಳೆದ ವರ್ಷ ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಅವರು ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ಆರೋಪಿಸಿ ಕುಸ್ತಿಪಟುಗಳು ನಡೆಸಿದ ಮುಷ್ಕರದಲ್ಲಿ ವಿನೇಶಾ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT