ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಜಯ

Published 4 ಫೆಬ್ರುವರಿ 2024, 15:53 IST
Last Updated 4 ಫೆಬ್ರುವರಿ 2024, 15:53 IST
ಅಕ್ಷರ ಗಾತ್ರ

ನವದೆಹಲಿ: ಸುಶೀಲ್‌ ಮತ್ತು ಅಕ್ಷಿತ್‌ ಧುಳ್‌ ಅವರ ಅಮೋಘ ರೇಡಿಂಗ್‌ ಬಲದಿಂದ ಬೆಂಗಳೂರು ಬುಲ್ಸ್‌ ತಂಡವು ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಭಾನುವಾರ 42–37ರಿಂದ ಯು ಮುಂಬಾ ವಿರುದ್ಧ ಗೆಲುವು ಸಾಧಿಸಿತು.

ಇಲ್ಲಿನ ತ್ಯಾಗರಾಜ್ ಕ್ರೀಡಾ ಸಂಕೀರ್ಣದಲ್ಲಿ ನಡೆದ ಪಂದ್ಯದಲ್ಲಿ ಮಧ್ಯಂತರದ ವೇಳೆ 22–24ರಿಂದ ಹಿನ್ನಡೆಯಲ್ಲಿದ್ದ ಬುಲ್ಸ್‌ ತಂಡವು ನಂತರ ಸಾಂಘಿಕ ಆಟ ಪ್ರದರ್ಶಿಸಿ ಐದು ಅಂಗಗಳ ಗೆಲುವು ಸಾಧಿಸಿತು.

ಸುಶೀಲ್‌ ಮತ್ತು ಅಕ್ಷಿತ್‌ ಕ್ರಮವಾಗಿ 10 ಮತ್ತು 8 ಪಾಯಿಂಟ್ಸ್‌ ತಂದುಕೊಟ್ಟರೆ, ಟ್ಯಾಕಲ್‌ನಲ್ಲಿ ಸುರ್ಜೀತ್ ಸಿಂಗ್ ಮತ್ತು ರಾನ್‌ ಸಿಂಗ್ ಕ್ರಮವಾಗಿ 6 ಮತ್ತು 5 ಅಂಕಗಳೊಂದಿಗೆ ಗೆಲುವಿಗೆ ಉಪಯುಕ್ತ ಕಾಣಿಕೆ ನೀಡಿದರು. ಯು ಮುಂಬಾ ತಂಡದ ಜೈ ಭಗವಾನ್‌ ‘ಸೂಪರ್‌ ಟೆನ್‌’ ಸಾಧನೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT