ಬ್ರಿಸ್ಬೇನ್ ಇಂಟರ್‌ನ್ಯಾಷನಲ್ ಟೂರ್ನಿಯ ಪಂದ್ಯದಲ್ಲಿ 55ನೇ ಶ್ರೇಯಾಂಕದ ಥಾಂಪ್ಸನ್ 5-7, 7-6 (6), 6-3 ಸೆಟ್‌ಗಳಿಂದ ನಡಾಲ್ ಅವರನ್ನು ಸೊಲಿಸಿದರು. 22 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದಿರುವ 37 ವರ್ಷದ ನಡಾಲ್, ಎರಡನೇ ಸೆಟ್‌ನ 10 ನೇ ಗೇಮ್‌ನಲ್ಲಿ ಒಂದು ಮ್ಯಾಚ್ ಪಾಯಿಂಟ್ ಮತ್ತು ಟೈಬ್ರೇಕರ್‌ನಲ್ಲಿ ಇನ್ನೂ ಎರಡು ಮ್ಯಾಚ್ ಪಾಯಿಂಟ್ ಪರಿವರ್ತಿಸಲು ವಿಫಲರಾದರು.