ನವದೆಹಲಿ: ಭಾರತದ ಸಚಿನ್ ರಾಟಿ ಹಾಗೂ ದೀಪಕ್ ಪುನಿಯಾ ಅವರು ಇಲ್ಲಿ ನಡೆಯುತ್ತಿರುವ ಜೂನಿಯರ್ ಏಷ್ಯನ್ ಕುಸ್ತಿ ಚಾಂಪಿಯನ್‌ಷಿಪ್ ನಲ್ಲಿ ಚಿನ್ನದ ಸಾಧನೆ ಮಾಡಿದ್ದಾರೆ.

ಭಾನುವಾರ ನಡೆದ ಪುರುಷರ 74 ಕೆ. ಜಿ. ವಿಭಾಗದಲ್ಲಿ ಸಚಿನ್ ಅವರು ಮಂಗೋಲಿಯಾದ ಬತೆರ್ದೇನ್ ಬ್ಯಾಂಬ್‌ಸುರೇನ್ ಅವರನ್ನು ಮಣಿಸಿದರು. ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತದ ಆಟಗಾರ ಎದುರಾಳಿಯ ಸವಾಲು ಮೀರಿದರು.

86 ಕೆ. ಜಿ. ವಿಭಾಗದ ಫೈನಲ್‌ನಲ್ಲಿ ದೀಪಕ್, ಟರ್ಕ್‌ಮೆನಿಸ್ತಾನದ ಅಜತ್ ಗಜ್ಯೇವ್ ಅವರನ್ನು ಸೋಲಿಸಿದರು.

ಭಾರತದ ಸೂರಜ್ ಕೋಕಟೆ (61 ಕೆ. ಜಿ. ವಿಭಾಗ), ಮೋಹಿತ್ (125 ಕೆ.ಜಿ. ವಿಭಾಗ) ಅವರು ಕಂಚಿನ ಪದಕಗಳಿಗೆ ತೃಪ್ತಿಪಟ್ಟುಕೊಂಡರು.

ಈ ಸಾಧನೆಯೊಂದಿಗೆ ಭಾರತ ಕುಸ್ತಿ ತಂಡ 173 ಪಾಯಿಂಟ್ಸ್ ಸಂಗ್ರಹಿಸಿ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸ್ಥಾನ ಗಳಿಸಿತು. ಒಟ್ಟು 189 ಪಾಯಿಂಟ್ಸ್
ಗಳೊಂದಿಗೆ ಇರಾನ್ ಅಗ್ರಸ್ಥಾನ ಪಡೆಯಿತು. ಉಜಬೇಕಿಸ್ತಾನ್ ಮೂರನೇ ಸ್ಥಾನ ಪಡೆಯಿತು. ಅದು ಒಟ್ಟು 128 ಪಾಯಿಂಟ್ಸ್ ಸಂಗ್ರಹಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.