ಕುಮಟಾ: ಇಲ್ಲಿನಬಾಳಿಗಾ ಕಲಾ– ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿ ರೋಹಿತ್ ನಾಯ್ಕ, ಕಿರಿಯರ ಕಬಡ್ಡಿ ವಿಶ್ವಕಪ್ನಲ್ಲಿ ಭಾಗವಹಿಸುವ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಥಾಯ್ಲೆಂಡ್ನಲ್ಲಿ ಅ. 3ರಂದು ನಡೆಯುವ 17 ವರ್ಷ ವಯಸ್ಸಿನೊಳಗಿನ ಮೂರನೇ ವಿಶ್ವಕಪ್ ಕಬಡ್ಡಿಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜುಲೈ 23, 24ರಂದು ಉತ್ತರಪ್ರದೇಶದಲ್ಲಿ ನಡೆದ ರಾಜೀವ್ ಗಾಂಧಿ ರಾಷ್ಟ್ರೀಯ ಕಿರಿಯರ ಕಬಡ್ಡಿ ಪಂದ್ಯದಲ್ಲಿ ಅವರು ಗಮನಾರ್ಹ ಪ್ರದರ್ಶನ ನೀಡಿದ್ದರು.

ಸಿದ್ದಾಪುರ ತಾಲ್ಲೂಕಿನ ಸುಂಕತ್ತಿ ಗ್ರಾಮದ ರೋಹಿತ್ ನಾಯ್ಕ ಅವರ ತಂದೆ ಧರ್ಮಾ ನಾಯ್ಕ ಹಾಗೂ ತಾಯಿ ಪಾರ್ವತಿ ನಾಯ್ಕ ಕೃಷಿಕರಾಗಿದ್ದಾರೆ. ಸಿದ್ದಾಪುರ ಹಲಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿಎಸ್ಸೆಸ್ಸೆಲ್ಸಿಓದಿದ ರೋಹಿತ್, ಕುಮಟಾದಲ್ಲಿ ವಸತಿನಿಲಯದಲ್ಲಿದ್ದು ಕಾಲೇಜು ವಿದ್ಯಾಭ್ಯಾಸ ಮುಂದುವರಿಸುತ್ತಿದ್ದಾರೆ.

‘ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಜಿ.ಡಿ.ಭಟ್ಟ ತರಬೇತಿ ನೀಡಿದ್ದಾರೆ.ರಾಜ್ಯದಕಿರಿಯರ ಕಬಡ್ಡಿ ತಂಡದಲ್ಲಿ ಮೈಸೂರಿನ ರಮಾನಾಥ ರೈ ಹಾಗೂ ಭಾರತ ತಂಡದಲ್ಲಿ ಅಭು ಸಿಂಗ್ ಯಾದವ್ ತರಬೇತಿ ನೀಡುತ್ತಿದ್ದಾರೆ. ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಬಿ.ಸಿ.ರಮೇಶ ಅವರು ನನ್ನ ಆಟವನ್ನು ನೋಡಿ ಪ್ರೋತ್ಸಾಹಿಸಿದ್ದಾರೆ. ತಂಡದಲ್ಲಿ ಹೆಚ್ಚಾಗಿ ಮೂರನೇ ಆಟಗಾರನಾಗಿ (ಥರ್ಡ್ ಮ್ಯಾನ್) ನಾನು ಆಡುತ್ತೇನೆ. ಆದರೂ ಆಲ್ ರೌಂಡ್ ಆಟ ನನಗೆ ಇಷ್ಟ’ ಎಂದು ರೋಹಿತ್ ಹೇಳಿದರು.

‘ಪ್ರೊಕಬಡ್ಡಿಯಲ್ಲಿ ಅವಕಾಶ ಪಡೆಯಬೇಕು ಎನ್ನುವುದು ನನ್ನ ಕನಸು.ಅದರಲ್ಲಿ ರೈಡರ್ ಪ್ರಭಂಜನ್ ಹಾಗೂ ಡಿಫೆಂಡರ್ ಮಹೇಂದ್ರ ಸಿಂಗ್ ನನ್ನ ಮೆಚ್ಚಿನ ಆಟಗಾರರು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.