ಬೆಂಗಳೂರು: ಎಚ್ಬಿಆರ್ ಬಿ.ಸಿ ತಂಡವು ಎಸ್. ರಂಗರಾಜನ್ ಸ್ಮರಣಾರ್ಥ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ‘ಸಿ’ ಡಿವಿಷನ್ ಲೀಗ್ ಪುರುಷರ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನ ಪಂದ್ಯದಲ್ಲಿ 82–58ರಿಂದ ಯಲಹಂಕ ನ್ಯೂ ಟೌನ್ ತಂಡವನ್ನು ಸೋಲಿಸಿತು.

ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್ಬಾಲ್ ಕೋರ್ಟ್ನಲ್ಲಿ ಶನಿವಾರ ನಡೆದ ಲೀಗ್ ಪಂದ್ಯದಲ್ಲಿ, ಪ್ರಥಮಾರ್ಧದಲ್ಲಿ 8 ಅಂಕಗಳಿಂದ (41–33) ಮುನ್ನಡೆಯಲ್ಲಿದ್ದ ಎಚ್ಬಿಆರ್ ಬಿ.ಸಿ ತಂಡವು ಉತ್ತರಾರ್ಧದಲ್ಲಿ ಪಾರಮ್ಯ ಮೆರೆಯಿತು. ಎಚ್ಬಿಆರ್ ಪರ ಸಂಕೇತ್ 26 ಅಂಕ ಗಳಿಸಿದರೆ, ಶಶಿಧರ್ (13 ಅಂಕ) ಉತ್ತಮ ಸಾಥ್ ನೀಡಿದರು.

ಯಲಹಂಕ ನ್ಯೂ ಟೌನ್ ತಂಡದ ಚೆಗುವೆರಾ 27 ಹಾಗೂ ಪೂರ್ಣ 11 ಪಾಯಿಂಟ್ಸ್ ಕಲೆಹಾಕಿದರು.

ಮತ್ತೊಂದು ಪಂದ್ಯದಲ್ಲಿ ಸಿನ್ಸಿನಾಟೀಸ್ ಬ್ಯಾಸ್ಕೆಟ್ಬಾಲ್ ಕ್ಲಬ್ (ಬಿ.ಸಿ) ತಂಡವು 67–64ರಿಂದ ಅಪ್ಪಯ್ಯ ಬಿ.ಸಿ ಎದುರು ರೋಚಕ ಗೆಲುವು ಸಾಧಿಸಿತು.

ಪ್ರಥಮಾರ್ಧದಲ್ಲಿ 6 ಅಂಕಗಳಿಂದ ಹಿಂದಿದ್ದ ಸಿನ್ಸಿನಾಟೀಸ್, ಉತ್ತರಾರ್ಧದಲ್ಲಿ ಚುರುಕಿನ ಆಟದ ಮೂಲಕ ಮೇಲುಗೈ ಸಾಧಿಸಿತು. ಸಿನ್ಸಿನಾಟೀಸ್ ಪರ ಶಶಾಂಕ್ ಎಸ್. 28 ಹಾಗೂ ಕೃಷ್ಣಾ 11 ಅಂಕ ಸಂಪಾದಿಸಿದರು. ಅಪ್ಪಯ್ಯ ಬಿ.ಸಿ ತಂಡದ ವಿನೀತ್ 17 ಹಾಗೂ ಪ್ರದ್ಯುಮ್ನ 15 ಅಂಕ ಗಳಿಸಿ, ಪ್ರಬಲ ಪೈಪೋಟಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.