ನವದೆಹಲಿ: ಭಾರತ ಕುಸ್ತಿ ಫೆಡರೇಷನ್‌ನ ಅಡ್‌ಹಾಕ್ ಸಮಿತಿಯು ಜೈಪುರದಲ್ಲಿ ಅಯೋಜಿಸಿರುವ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕುಸ್ತಿಪಟುಗಳು ಸ್ಪರ್ಧಿಸಿ. ಆದರೆ ಅಮಾನತುಗೊಂಡಿರುವ ಸಂಜಯ್ ಸಿಂಗ್ ನೇತೃತ್ವದ ಸಮಿತಿಯು ಪುಣೆಯಲ್ಲಿ ನಡೆಸಲಿರುವ ಟೂರ್ನಿಯಲ್ಲಿ ಬೇಡ ಎಂದು ಒಲಿಂಪಿಯನ್ ಸಾಕ್ಷಿ ಮಲಿಕ್ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹೇಳಿಕೆ ನೀಡಿರುವ ಅವರು, ‘ಅಡ್‌ಹಾಕ್ ಸಮಿತಿಯು ನಡೆಸಲಿರುವ ಟೂರ್ನಿಯು ಅಧಿಕೃತವಾಗಿದೆ. ಅಮಾನತುಗೊಂಡಿರುವ ಸಮಿತಿಯಿಂದ ನಡೆಸುವ ಟೂರ್ನಿಯಲ್ಲಿ ಭಾಗವಹಿಸಬೇಡಿ’ ಎಂದಿದ್ದಾರೆ.

ಜೈಪುರದಲ್ಲಿ ರಾಷ್ಟ್ರೀಯ ಚಾಂಪಿಯನ್‌ಷಿಪ್ ಫೆ.2ರಿಂದ 5ರವರೆಗೆ ನಡೆಯಲಿದೆ.

ಈಚೆಗೆ ಡಬ್ಲ್ಯುಎಫ್‌ಐಗೆ ನಡೆದಿದ್ದ ಚುನಾವಣೆಯಲ್ಲಿ ಸಂಜಯ್ ಸಿಂಗ್ ಗುಂಪು ಗೆಲುವು ಸಾಧಿಸಿತ್ತು. ಆದರೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳನ್ನು ತರಾತುರಿಯಲ್ಲಿ ಘೋಷಿಸಿದ್ದು ನಿಯಮಬಾಹಿರ ಎಂದು ಆಕ್ಷೇಪಿಸಿದ್ದ ಕೇಂದ್ರ ಕ್ರೀಡಾ ಸಚಿವಾಲಯವು ಸಂಜಯ್ ಅಧ್ಯಕ್ಷತೆಯ ಆಡಳಿತ ಸಮಿತಿಯನ್ನು ಅಮಾನತುಗೊಳಿಸಿತ್ತು.

ಇದರಿಂದಾಗಿ ಭಾರತ ಒಲಿಂಪಿಕ್ ಸಂಸ್ಥೆ (ಐಒಎ)ಯು ಭೂಪಿಂದರ್ ಸಿಂಗ್ ಬಜ್ವಾ ನೇತೃತ್ವದ ಅಡ್‌ಹಾಕ್ ಸಮಿತಿಯನ್ನು ರಚಿಸಿತ್ತು.

ಆದರೆ ಕೆಲವು ಕುಸ್ತಿಪಟುಗಳು ಪುಣೆಯಲ್ಲಿ ನಡೆಯಲಿರುವ ಟೂರ್ನಿಗೆ ಹೋಗುವುದಾಗಿ ಈಗಾಗಲೇ ಘೋಷಿಸಿದ್ದಾರೆ.

‘ಡಬ್ಲ್ಯುಎಫ್‌ಐ ಪುಣೆಯಲ್ಲಿ ಸಂಘಟಿಸಲಿರುವ ಟೂರ್ನಿಯಲ್ಲಿ ಆಡುತ್ತೇವೆ. ನಮ್ಮ ಅಖಾಡದ ಎಲ್ಲರೂ ಅಲ್ಲಿಗೆ ಹೋಗುತ್ತೇವೆ. ಈ ವಿವಾದವು ಹರಿಯಾಣಕ್ಕೆ ಮಾತ್ರ ಸೀಮಿತವಾಗಿದೆ. ದೆಹಲಿ, ಪಂಜಾಬ್ ಮತ್ತು ರಾಜಸ್ಥಾನದ ಎಲ್ಲ ಕುಸ್ತಿಪಟುಗಳೂ ಪುಣೆಗೆ ಹೋಗುತ್ತಿದ್ದಾರೆ‘ ಎಂದು ರೋಹ್ಟಕ್‌ನ ಹೆಸರು ಹೇಳಲು ಇಚ್ಛಿಸದ ಮಹಿಳಾ ಕುಸ್ತಿಪಟು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.