ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಈಜು: ಸಮರ್ಥ್‌ ಮತ್ತೊಂದು ದಾಖಲೆ

Published 11 ಜುಲೈ 2024, 0:13 IST
Last Updated 11 ಜುಲೈ 2024, 0:13 IST
ಅಕ್ಷರ ಗಾತ್ರ

ಬೆಂಗಳೂರು: ಸಮರ್ಥ್‌ ಗೌಡ ಬಿ.ಎಸ್‌. ಇಲ್ಲಿ ನಡೆಯುತ್ತಿರುವ ಎನ್‌ಆರ್‌ಜೆ ರಾಜ್ಯ ಸಬ್ ಜೂನಿಯರ್ ಮತ್ತು ಜೂನಿಯರ್ ಈಜು ಚಾಂಪಿಯನ್‌ಷಿಪ್‌ನ ಐದನೇ ದಿನವಾದ ಬುಧವಾರ ಬಾಲಕರ (1ಎ) 50 ಮೀಟರ್‌ ಬ್ಯಾಕ್ ಸ್ಟ್ರೋಕ್ ಸ್ಪರ್ಧೆಯಲ್ಲಿ ಕೂಟ ದಾಖಲೆ ನಿರ್ಮಿಸಿದರು.

ಆತಿಥೇಯ ಬಸವನಗುಡಿ ಈಜು ಕೇಂದ್ರದ ಸಮರ್ಥ್‌ ಅವರು 28.41 ಸೆಕೆಂಡ್‌ನಲ್ಲಿ ಗುರಿ ತಲುಪಿ ಚಿನ್ನ ಗೆದ್ದರು.  ಆಡ್ರಿಯನ್ ನೀಲ್ ಸೆರಾವೊ (30.51 ಸೆ) ಮತ್ತು ಅರ್ನವ್ ಜಿ. ರಾವ್ (31.89 ಸೆ) ಕ್ರಮವಾಗಿ ನಂತರದ ಸ್ಥಾನ ಪಡೆದರು. ಸಮರ್ಥ್ ಮಂಗಳವಾರ ಬಾಲಕರ (2ಎ) 100 ಮೀಟರ್‌ ಬ್ಯಾಕ್‌ಸ್ಟ್ರೋಕ್‌ನಲ್ಲೂ ದಾಖಲೆ ನಿರ್ಮಿಸಿದ್ದರು.

ಬಾಲಕಿಯರ ವಿಭಾಗದಲ್ಲಿ ನೆಟ್ಟಕಲ್ಲಪ್ಪ ಈಜು ಕೇಂದ್ರದ ಸ್ಪರ್ಧಿಗಳು ಮೂರು ಚಿನ್ನದ ಪದಕಗಳನ್ನು ಗೆದ್ದು ಮಿಂಚಿದರು. ವೈಷ್ಣವಿ ಜಿ. (2ಎ; 200 ಮೀ. ಬಟರ್‌ಫ್ಲೈ), ಶಾರಿಕಾ ರಾಘವೇಂದ್ರ (2ಬಿ; 50ಮೀ. ಬ್ರೆಸ್ಟ್‌ಸ್ಟ್ರೋಕ್) ಮತ್ತು ಇಂಚರಾ ಎಚ್‌.ಆರ್. (2ಸಿ; 50ಮೀ. ಬ್ರೆಸ್ಟ್‌ ಸ್ಟ್ರೋಕ್) ಅವರು ಚಿನ್ನ ಗೆದ್ದರು.

ಫಲಿತಾಂಶ:

ಬಾಲಕರು: 2ಎ; 200 ಮೀ. ಮೆಡ್ಲೆ: ರಕ್ಷಣ್ ಪಿ. (ಎಸಿಇ, 2 ನಿ.28.72ಸೆ). 200 ಮೀ. ಬಟರ್‌ಫ್ಲೈ: ಧ್ರುಪದ್ ರಾಮಕೃಷ್ಣ (ಬಿಎಸಿ, 2 ನಿ. 22.76 ಸೆ). 50 ಮೀ. ಬ್ರೆಸ್ಟ್ ಸ್ಟ್ರೋಕ್: ಯಶ್ ಎಚ್. ಪಾಲ್ (ಬಿಎಸಿ,  33.69ಸೆ). 50 ಮೀ. ಬ್ಯಾಕ್ ಸ್ಟ್ರೋಕ್: ಸಮರ್ಥ್ ಗೌಡ ಬಿ.ಎಸ್. (ಬಿಎಸಿ, 28.41ಸೆ). 100 ಮೀ. ಫ್ರೀಸ್ಟೈಲ್: ಅಕ್ಷಜ್ ಠಾಕುರಿಯಾ (ಡಾಲ್ಫಿನ್ ಅಕ್ವಾಟಿಕ್ಸ್, 55.41 ಸೆ). 2ಬಿ: 200ಮೀ ಮೆಡ್ಲೆ: ಆರವ್ ಜೆ. (ಬಿಎಸಿ 2 ನಿ. 28.67ಸೆ).

200ಮೀ ಬಟರ್ ಫ್ಲೈ: ಸುಬ್ರಹ್ಮಣ್ಯ ಜೀವಾಂಶ್ ಎಂ. (ಡಾಲ್ಫಿನ್, 2 ನಿ. 19.39 ಸೆ)–1. ಸಹಿಷ್ಣು ರಾಘವೇಂದ್ರ ರಾವ್ (ಎನ್‌ಎಸಿ, 2 ನಿ.39.06 ಸೆ)– 3. 50ಮೀ ಬ್ರೆಸ್ಟ್ ಸ್ಟ್ರೋಕ್: ರೆಯಾನ್ಶ್ ಕಂಠಿ ವೈ (ಬಿಎಸಿ, 36.67ಸೆ)– 1. ಕೋವಿಧ್ ಫಣಿ ತೋಟ (ಎನ್‌ಎಸಿ, 37.98 ಸೆ)–3

50 ಮೀ. ಬ್ಯಾಕ್ ಸ್ಟ್ರೋಕ್: ಅದ್ವೈತ ವಿ.ಎಂ. (ಬಿಎಸಿ, 30.43ಸೆ). 100 ಮೀ. ಫ್ರೀಸ್ಟೈಲ್: ಗರಪತಿ ಭಾರಧ್ವಾಜ್ (ಗೋಲ್ಡನ್, 1 ನಿ.00.44 ಸೆ). 2ಸಿ: 200 ಮೀ ಮೆಡ್ಲೆ: ಅದ್ವೈತ್ ದಲ್ವಿ (ಎಸ್‌ಸಿಬಿ‌, 2 ನಿ.39.78 ಸೆ). 200ಮೀ. ಬಟರ್‌ಫ್ಲೈ: ವೇದಾಂತ್ ಮಿಸಾಲೆ (ಎಸ್‌ಸಿಬಿ, 2 ನಿ.31.98 ಸೆ). 50 ಮೀ. ಬ್ರೆಸ್ಟ್ ಸ್ಟ್ರೋಕ್: ಚೇತನ್ ನಾಗರಾಜ ಗಣಪ (ಎನ್‌ಎಸಿ, 37.71ಸೆ). 50ಮೀ. ಬ್ಯಾಕ್ ಸ್ಟ್ರೋಕ್: ಕ್ರಿಶ್ ಎಸ್. (ಬಿಎಸಿ, 32.96ಸೆ). 100ಮೀ ಫ್ರೀಸ್ಟೈಲ್: ರೋನಿತ್ ಅರುಣ್‌ಕುಮಾರ್ (ಬಿಎಸ್‌ಎ, 1 ನಿ.03.77ಸೆ).

ಬಾಲಕಿಯರು: 2ಎ: 200 ಮೀ. ಮೆಡ್ಲೆ: ತಿಸ್ಯಾ ಸೋನಾರ್ (ಮತ್ಸ್ಯ, 2 ನಿ.35.62ಸೆ). 200 ಮೀ. ಬಟರ್‌ಫ್ಲೈ: ವೈಷ್ಣವಿ ಜಿ. (ಎನ್‌ಎಸಿ, 2 ನಿ.58.27 ಸೆ). 50 ಮೀ. ಬ್ರೆಸ್ಟ್ ಸ್ಟ್ರೋಕ್: ಆನ್ಯಾ ಎ. ಚಕ್ರವರ್ತಿ (ಡಾಲ್ಫಿನ್, 36.64 ಸೆ). 50 ಮೀ. ಬ್ಯಾಕ್ ಸ್ಟ್ರೋಕ್: ನೈಶಾ (ಬಿಎಸಿ, 31.58 ಸೆ). 100 ಮೀ. ಫ್ರೀಸ್ಟೈಲ್: ತಿಸ್ಯಾ ಸೋನಾರ್ (ಮತ್ಸ್ಯ, 1 ನಿ.01.40 ಸೆ). 2ಬಿ: 200 ಮೀ. ಮೆಡ್ಲೆ: ತ್ರಿಶಾ ಸಿಂಧು (ಜಿಎಸ್‌ಸಿ, 2 ನಿ.38.79 ಸೆ). 200ಮೀ ಬಟರ್‌ಫ್ಲೈ: ಶೆಲಿನ್ ಸುನಿಲ್ (ಡಾಲ್ಫಿನ್, 2 ನಿ.37.67ಸೆ).

50ಮೀ. ಬ್ರೆಸ್ಟ್ ಸ್ಟ್ರೋಕ್: ಶಾರಿಕಾ ರಾಘವೇಂದ್ರ (ಎನ್‌ಎಸಿ, 38.83ಸೆ). 50 ಮೀ. ಬ್ಯಾಕ್ ಸ್ಟ್ರೋಕ್: ಆದ್ಯಾ ನಾಯರ್ (ಡಾಲ್ಫಿನ್, 33.77ಸೆ). 100 ಮೀ. ಫ್ರೀಸ್ಟೈಲ್: ತ್ರಿಶಾ ಸಿಂಧು (ಜಿಎಸ್‌ಸಿ, 1 ನಿ.04.30 ಸೆ). 2ಸಿ: 200 ಮೀ. ಮೆಡ್ಲೆ: ಧೃತಿ ಕರಿಬಸವೇಶ್ವರ (ಎಸಿಇ, 2 ನಿ.43.74 ಸೆ). 200 ಮೀ ಬಟರ್‌ಫ್ಲೈ: ರಿಶ್ಮಿಖಾ ಆರ್ (ಬಿಎಸಿ, 2 ನಿ. 51.32 ಸೆ). 50 ಮೀ. ಬ್ರೆಸ್ಟ್ ಸ್ಟ್ರೋಕ್: ಇಂಚರಾ ಎಚ್.ಆರ್ (ಎನ್‌ಎಸಿ, 39.88ಸೆ). 50 ಮೀ. ಬ್ಯಾಕ್‌ಸ್ಟ್ರೋಕ್: ಔನಾ ಪಿ. ಆಳ್ವ (ಬಿಎಸ್‌ಎ, 35.41ಸೆ). 100 ಮೀ. ಫ್ರೀಸ್ಟೈಲ್: ದಿಶಾ ಹೊಂಡಿ (ಎಬಿಬಿಎಎ, 1 ನಿ.06.68ಸೆ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT