ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Korea Open Badminton 2023: ಭಾರತದ ಸಾತ್ವಿಕ್‌-ಚಿರಾಗ್ ಜೋಡಿ ಚಾಂಪಿಯನ್

Published 23 ಜುಲೈ 2023, 8:51 IST
Last Updated 23 ಜುಲೈ 2023, 8:51 IST
ಅಕ್ಷರ ಗಾತ್ರ

ಯೋಸು (ಕೊರಿಯಾ): ಭಾರತದ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ, ಕೊರಿಯಾ ಓಪನ್‌ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ವಿಶ್ವದ ಮೂರನೇ ಕ್ರಮಾಂಕದ ಸಾತ್ವಿಕ್‌-ಚಿರಾಗ್ ಜೋಡಿ ಭಾನುವಾರ ನಡೆದ ಪುರುಷರ ಡಬಲ್ಸ್ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕಿತ ಫಜರ್ ಅಲ್ಫಿಯಾನ್‌ ಹಾಗೂ ಮುಹಮ್ಮದ್‌ ರಿಯಾಣ್‌ ಅರ್ಡಿಯಾಂಟೊ ವಿರುದ್ಧ 17-21 21-13 21-14 ರ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಸಾತ್ವಿಕ್‌-ಚಿರಾಗ್ ಜೋಡಿ ಪ್ರಸಕ್ತ ಸಾಲಿನಲ್ಲಿ ನಾಲ್ಕನೇ ಬಾರಿಗೆ ಫೈನಲ್‌ಗೇರಿದ್ದಾರೆ. ಏಷ್ಯನ್ ಚಾಂಪಿಯನ್‌ಶಿಪ್, ಇಂಡೊನೇಷ್ಯಾ ಸೂಪರ್‌ 1000 ಮತ್ತು ಸ್ವಿಸ್‌ ಓಪನ್‌ ಸೂಪರ್‌ 500 ಸಿರೀಸ್‌ ಟೂರ್ನಿಯಲ್ಲೂ ಪ್ರಶಸ್ತಿ ಜಯಿಸಿದ್ದರು. 2022ರಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲೂ ಚಿನ್ನ ಜಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT