ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್ ಟೂರ್ನಿ: ಇಶಾನ್‌, ಆಹಾನ್‌ಗೆ ‘ಡಬಲ್‌’ ಪ್ರಶಸ್ತಿ

Published 9 ಡಿಸೆಂಬರ್ 2023, 9:22 IST
Last Updated 9 ಡಿಸೆಂಬರ್ 2023, 9:22 IST
ಅಕ್ಷರ ಗಾತ್ರ

ಬೆಂಗಳೂರು: ಇಶಾನ್ ಯಡ್ಲಪಲ್ಲಿ ಅವರು ಕೆಎಸ್‌ಎಲ್‌ಟಿಎ ಏಷ್ಯನ್‌ 14 ವರ್ಷದೊಳಗಿನ ಟೆನಿಸ್ ಟೂರ್ನಿಯಲ್ಲಿ ಬಾಲಕರ ವಿಭಾಗದ ಸಿಂಗಲ್ಸ್‌ ಮತ್ತು ಡಬಲ್ಸ್‌ನಲ್ಲಿ ಪ್ರಶಸ್ತಿಯನ್ನು ಗೆದ್ದರು. ಬಾಲಕಿಯರ ವಿಭಾಗದಲ್ಲಿ ಎ.ಆಹಾನ್ ಕೂಡ ‘ಡಬಲ್‌’ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಶುಕ್ರವಾರ ನಡೆದ ಬಾಲಕರ ಸಿಂಗಲ್ಸ್‌ನ ಫೈನಲ್‌ ಪಂದ್ಯದಲ್ಲಿ ಇಶಾನ್‌ ಅವರು 6–4, 6–4ರಿಂದ ಎಸ್‌. ಸುವರ್ಣ ಅವರನ್ನು ಮಣಿಸಿದರು. ಬಾಲಕರ ಡಬಲ್ಸ್‌ನಲ್ಲಿ ಆಹಾನ್‌ ಮಿಶ್ರಾ ಅವರೊಂದಿಗೆ 6-1, 6-4 ರಿಂದ ಎ.ಪಳನಿಸಾಮಿ ಮತ್ತು ಇಶಾನ್ ಸುದರ್ಶನ್ ಅವರನ್ನು ಸೋಲಿಸಿ ಚಾಂಪಿಯನ್‌ ಆದರು.

ಬಾಲಕಿಯರ ಸಿಂಗಲ್ಸ್‌ನಲ್ಲಿ ಆಹಾನ್‌ 6–2, 6–0ಯಿಂದ ಕೆ.ಪದ್ಮಕುಮಾರ್‌ ಅವರನ್ನು ಮಣಿಸಿ ಕಿರೀಟ ಗೆದ್ದರು. ತುಸು ಹೊತ್ತಿನ ಬಳಿಕ ಡಬಲ್ಸ್‌ನಲ್ಲಿ ಪದ್ಮಕುಮಾರ್‌ ಜೊತೆಗೂಡಿ 6-3, 6-2ರಿಂದ ಶ್ರೇನಿತಿ ಚೌಧರಿ ಮತ್ತು ಜಾಹ್ನವಿ ತಮ್ಮಿನೀದಿ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT