ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಶೂಟಿಂಗ್‌ ಚಾಂಪಿಯನ್‌ಷಿಪ್‌: ಅಖಿಲ್‌ಗೆ ಕಂಚು, ಒಲಿಂಪಿಕ್ಸ್‌ ಅರ್ಹತೆ

Published 20 ಆಗಸ್ಟ್ 2023, 16:06 IST
Last Updated 20 ಆಗಸ್ಟ್ 2023, 16:06 IST
ಅಕ್ಷರ ಗಾತ್ರ

ಬಾಕು, ಅಜರ್‌ಬೈಜಾನ್: ಭಾರತದ ಅಖಿಲ್‌ ಶೊರಾನ್‌ ಅವರು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್‌ ವಿಶ್ವ ಶೂಟಿಂಗ್‌ ಚಾಂಪಿಯನ್‌ಷಿಪ್‌ನ ಪುರುಷರ ರೈಫಲ್‌ ತ್ರಿ ಪೊಸಿಷನ್‌ನಲ್ಲಿ ಕಂಚು ಗೆದ್ದುಕೊಂಡರಲ್ಲದೆ, ಮುಂಬರುವ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದರು.

ಭಾನುವಾರ ನಡೆದ ಸ್ಪರ್ಧೆಯಲ್ಲಿ ಫೈನಲ್‌ ಪ್ರವೇಶಿಸಿದ ಎಂಟು ಶೂಟರ್‌ಗಳಲ್ಲಿ ಅಖಿಲ್, 450.0 ಪಾಯಿಂಟ್ಸ್‌ಗಳೊಂದಿಗೆ ಮೂರನೇ ಸ್ಥಾನ ಪಡೆದರು. ಅವರು ಅರ್ಹತಾ ಹಂತದಲ್ಲಿ 585 ಪಾಯಿಂಟ್ಸ್‌ಗಳೊಂದಿಗೆ ಆರನೆಯವರಾಗಿ ಪದಕ ಸುತ್ತು ತಲುಪಿದ್ದರು. ಆಸ್ಟ್ರಿಯದ ಅಲೆಕ್ಸಾಂಡರ್‌ ಶ್ಮಿರ್ಲ್ (462.6) ಚಿನ್ನ ಹಾಗೂ ಜೆಕ್‌ ಗಣರಾಜ್ಯದ ಪೆಟ್ರ್ ನಿಂಬರ್‌ಸ್ಕಿ (459.2) ಬೆಳ್ಳಿ ಗೆದ್ದುಕೊಂಡರು.

ರಿದಂ ಸಾಂಗ್ವಾನ್, ಇಶಾ ಸಿಂಗ್‌ ಮತ್ತು ಮನು ಭಾಕರ್‌ ಅವರನ್ನೊಳಗೊಂಡ ಭಾರತ ಮಹಿಳಾ ತಂಡ 25  ಮೀ. ಪಿಸ್ತೂಲ್‌ ವಿಭಾಗದಲ್ಲಿ ಚಿನ್ನ ಜಯಿಸಿತು. ಒಟ್ಟು 1,744 ಪಾಯಿಂಟ್ಸ್‌ಗಳನ್ನು ಕಲೆಹಾಕಿದ ಭಾರತ ತಂಡ, ಚೀನಾ ತೈಪೆ ವಿರುದ್ಧ ಗೆದ್ದಿತು. ಈ ಸ್ಪರ್ಧೆಯ ಕಂಚು ಚೀನಾ ತನ್ನದಾಗಿಸಿಕೊಂಡಿತು.

ವೈಯಕ್ತಿಕ ವಿಭಾಗದಲ್ಲಿ ಎಂಟನೇ ಸ್ಥಾನ ಪಡೆದ ಸಾಂಗ್ವಾನ್‌ ಅವರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಳ್ಳುವ ಅವಕಾಶ ಕಳೆದುಕೊಂಡರು.

ಅಖಿಲ್‌, ಐಶ್ವರ್ಯ ಪ್ರತಾಪ್‌ ಸಿಂಗ್‌ ತೋಮರ್‌ ಮತ್ತು ನೀರಜ್‌ ಕುಮಾರ್‌ ಅವರಿದ್ದ ಭಾರತ ತಂಡ ಪುರುಷರ ರೈಫಲ್‌ ತ್ರಿ ಪೊಸಿಷನ್‌ನಲ್ಲಿ ಒಟ್ಟು 1,750 ಪಾಯಿಂಟ್ಸ್‌ಗಳೊಂದಿಗೆ ಚಿನ್ನ ಗೆದ್ದಿತು. ಈ ಮೂಲಕ ಅಖಿಲ್ ಒಂದೇ ದಿನ ಎರಡು ಪದಕ ಗೆದ್ದ ಸಾಧನೆ ಮಾಡಿದರು.

‘ವಿಶ್ವಕಪ್‌ ಶೂಟಿಂಗ್‌ನಲ್ಲಿ ಪದಕ ಗೆಲ್ಲುವ ಜತೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವುದು ಸಂತಸ ಉಂಟುಮಾಡಿದೆ. ಹಲವು ವರ್ಷಗಳ ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿದೆ’ ಎಂದು ಅಖಿಲ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT