ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಏಷ್ಯನ್‌ 20 ವರ್ಷದೊಳಗಿನವರ ಅಥ್ಲೆಟಿಕ್ಸ್‌: ಭಾರತಕ್ಕೆ 3ನೇ ಚಿನ್ನ

Published : 5 ಜೂನ್ 2023, 15:47 IST
Last Updated : 5 ಜೂನ್ 2023, 15:47 IST
ಫಾಲೋ ಮಾಡಿ
Comments

ಯೆಚೊಯಾನ್‌ (ದಕ್ಷಿಣ ಕೊರಿಯಾ): ಸಿದ್ಧಾರ್ಥ್‌ ಚೌಧರಿ ಇಲ್ಲಿ ನಡೆಯುತ್ತಿರುವ ಏಷ್ಯನ್‌ 20 ವರ್ಷದೊಳಗಿನವರ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನ ಶಾಟ್‌ಪಟ್‌ ಸ್ಪರ್ಧೆಯಲ್ಲಿ ಭಾರತಕ್ಕೆ ಮೂರನೇ ಚಿನ್ನವನ್ನು ತಂದುಕೊಟ್ಟರು.

17 ವರ್ಷದ ಸಿದ್ಧಾರ್ಥ್‌ ತಮ್ಮ ಮೂರನೇ ಪ್ರಯತ್ನದಲ್ಲಿ ಶಾಟ್‌ಪಟ್‌ಅನ್ನು 19.52 ಮೀಟರ್‌ ಎಸೆಯುವ ಮೂಲಕ ಚಿನ್ನದ ಪದಕ ಗಳಿಸಿದರು.

ಪುರುಷರ ಜಾವೆಲಿನ್‌ ಥ್ರೋನಲ್ಲಿ ಶಿವಂ ಲೊಹಕರೆ (ದೂರ: 72.34 ಮೀ), 3,000 ಮೀಟರ್‌ ಸ್ಟೀಪಲ್‌ಚೇಸ್‌ನಲ್ಲಿ ಶಾರುಖ್ ಖಾನ್‌ (ಕಾಲ: 8ನಿ.51.74 ಸೆ) ಮತ್ತು ಮಹಿಳೆಯರ ಲಾಂಗ್‌ಜಂಪ್‌ನಲ್ಲಿ ಸುಷ್ಮಿತಾ (ದೂರ: 5.96 ಮೀ) ಬೆಳ್ಳಿ ಪದಕವನ್ನು ಗೆದ್ದರು.

800 ಮೀ. ಓಟದಲ್ಲಿ ಶಕೀಲ್ (ಕಾಲ: 1ನಿ.49.79ಸೆ) ಕಂಚಿನ ಪದಕ ಗೆದ್ದರು. 4x400 ಮೀ. ರಿಲೇ ಮಿಕ್ಸೆಡ್‌ ರಿಲೆ ತಂಡ (ಕಾಲ:3 ನಿ.30.12ಸೆ) ಕೂಡ ಮೂರನೇ ಸ್ಥಾನ ಪಡೆಯಿತು.

ಸೋಮವಾರ ಒಂದೇ ದಿನ ಭಾರತದ ಅಥ್ಲೀಟುಗಳು ಒಂದು ಚಿನ್ನ, 3 ಬೆಳ್ಳಿ, ‌2 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದಾರೆ. ಭಾನುವಾರ 2 ಚಿನ್ನ ಮತ್ತು 1 ಕಂಚಿನ ಪದಕ ಬಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT