ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳಾ ಟೆನಿಸ್‌: ಭಾರತದ ರಶ್ಮಿಕಾ ಮುನ್ನಡೆ

ಭಾರತದ ಝೀಲ್ ದೇಸಾಯಿ, ವೈದೇಹಿ ಚೌಧರಿಗೂ ಜಯ
Published 14 ಜನವರಿ 2024, 16:31 IST
Last Updated 14 ಜನವರಿ 2024, 16:31 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಶ್ರೀವಲ್ಲಿ ರಶ್ಮಿಕಾ ಭಮಿಡಪಾಟಿ ಇಲ್ಲಿನ ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾದ ಕೆಪಿಬಿ ಟ್ರಸ್ಟ್ ಐಟಿಎಫ್ ಮಹಿಳಾ ಓಪನ್‌ ಟೂರ್ನಿಯ ಕ್ವಾಲಿಫೈಯರ್‌ನ ಎರಡನೇ ಸುತ್ತಿಗೆ ಮುನ್ನಡೆದರು. ಅವರು ರಷ್ಯಾದ ಎಕತ್ರಿನಾ ಯಾಶಿನಾ ವಿರುದ್ಧ 7-5, 7-6 (5) ರಿಂದ ಜಯ ಗಳಿಸಿದರು.

ಟೂರ್ನಿಯ ಪ್ರಧಾನ ಸುತ್ತಿನ ಸ್ಪರ್ಧೆಗಳು ಮಂಗಳವಾರ ಆರಂಭವಾಗಲಿದೆ. ಈ ಸುತ್ತಿಗೆ ಕ್ವಾಲಿಫೈಯರ್‌ ಸುತ್ತಿನಿಂದ ಎಂಟು ಆಟಗಾರ್ತಿಯರು ಸೋಮವಾರ ಸ್ಥಾನ ಖಚಿತಪಡಿಸಿಕೊಳ್ಳಲಿದ್ದಾರೆ.

ಕಳೆದ ವರ್ಷ ಕೊನೆಯಲ್ಲಿ ಬೌರಿಂಗ್ ಇನ್‌ಸ್ಟಿಟ್ಯೂಟ್ ಐಟಿಎಫ್ ಓಪನ್‌ನಲ್ಲಿ ಚೊಚ್ಚಲ ಐಟಿಎಫ್ ಪ್ರಶಸ್ತಿಯನ್ನು ಗೆದ್ದಿದ್ದ ರಶ್ಮಿಕಾ ಅವರಿಗೆ ಮೊದಲ ಸುತ್ತಿನ ಪಂದ್ಯದಲ್ಲಿ ಎಕತ್ರಿನಾ ಅವರಿಂದ ಪ್ರಬಲ ಪೈಪೋಟಿ ಎದುರಾಯಿತು. ಇಬ್ಬರ ನಡುವೆ ಸಮಬಲದ ಹೋರಾಟ ನಡೆಯಿತು. ನಿಖರ ಸರ್ವ್‌ ಮತ್ತು ಚುರುಕಿನ ಆಟದ ಮೂಲಕ ರಶ್ಮಿಕಾ ಮೇಲುಗೈ ಸಾಧಿಸಿದರು.

14ನೇ ಶ್ರೇಯಾಂಕದ ಝೀಲ್ ದೇಸಾಯಿ ಮತ್ತು 11ನೇ ಶ್ರೇಯಾಂಕದ ವೈದೇಹಿ ಚೌಧರಿ ಕ್ವಾಲಿಫೈಯರ್‌ನ ಎರಡನೇ ಸುತ್ತು ಪ್ರವೇಶಿಸಿದ ಭಾರತದ ಇತರ ಆಟಗಾರ್ತಿಯರು.

ಕ್ವಾಲಿಫೈಯರ್‌ ಸುತ್ತಿನ ಪಂದ್ಯಗಳ ಫಲಿತಾಂಶ: ಲಾಟ್ವಿಯಾದ ಡಯಾನಾ ಮಾರ್ಸಿಂಕೆವಿಕಾ 6–2, 6–1 ರಿಂದ ಭಾರತದ ಲಕ್ಷ್ಮಿ ಗೌಡ ವಿರುದ್ಧ; ಜಪಾನ್‌ ಮೇ ಯಮಗುಚಿ 6-2, 6-0ಯಿಂದ ಸ್ವದೇಶದ ಯುಕಿನಾ ಸೈಗೊ ವಿರುದ್ಧ; ಜಪಾನ್‌ನ ಸಾಕಿ ಇಮಾಮುರಾ 6-1, 6-2 ರಿಂದ ಚೀನಾ ತೈಪೆಯ ಯು-ಯುನ್ ಲಿ ವಿರುದ್ಧ; ಥಾಯ್ಲೆಂಡ್‌ನ ಪುನ್ನಿನ್ ಕೊವಾಪಿಟುಕ್ಟೆಡ್ 6-0, 6-3 ರಿಂದ ಡೆನ್ಮಾರ್ಕ್‌ನ ಎಲೆನಾ ಜಮ್ಶಿದಿ ವಿರುದ್ಧ; ಸ್ಲೋವಾಕಿಯಾದ ವಿಕ್ಟೋರಿಯಾ ಮೊರ್ವಯೋವಾ 6-2, 6-4 ರಿಂದ ಭಾರತದ ಆಕಾಂಕ್ಷಾ ದಿಲೀಪ್ ವಿರುದ್ಧ;  ಭಾರತದ ಝೀಲ್ ದೇಸಾಯಿ 6-3, 6-0 ಯಿಂದ ಸ್ವದೇಶದ ಸೌಮ್ಯಾ ವಿರುದ್ಧ ಗೆಲುವು ಸಾಧಿಸಿದರು.

ಆಸ್ಟ್ರೇಲಿಯಾದ ಟೀನಾ ನಡಿನ್ ಸ್ಮಿತ್‌ 6-0, 6-1 ರಿಂದ ಭಾರತದ ಪ್ರತಿಭಾ ನಾರಾಯಣ ಪ್ರಸಾದ್ ಎದುರು; ಜಪಾನ್‌ನ ಮನ ಕವಾಮುರಾ 6-2, 6-4 ರಿಂದ ಭಾರತದ ವಂಶಿತಾ ಪಟಾನಿಯಾ ಎದುರು; ಜಪಾನ್‌ನ ನಹೋ ಸಾಟೊ 6-0, 6-0 ಯಿಂದ ಭಾರತದ ಶ್ರಾವ್ಯಾ ಶಿವಾನಿ ಎದುರು; ಭಾರತದ ಶ್ರೀವಲ್ಲಿ ರಶ್ಮಿಕಾ ಭಮಿಡಪಾಟಿ 7-5, 7-6 (5) ರಿಂದ ರಷ್ಯಾದ  ಎಕತ್ರಿನಾ ಯಾಶಿನಾ ಎದುರು; ಭಾರತದ ವೈದೇಹಿ ಚೌಧರಿ 6–1, 6–1 ರಿಂದ ಸ್ವದೇಶದ ಕಾಶ್ವಿ ಸುನಿಲ್ ಎದುರು; ಜಪಾನ್‌ನ ರಿನಾ ಸೈಗೊ 6-4, 6-0 ಯಿಂದ ಭಾರತದ ಸ್ಮೃತಿ ಭಾಸಿನ್ ಎದುರು; ಜಪಾನ್‌ನ ಎರಿ ಶಿಮಿಜು 6-4, 6-1 ರಿಂದ ಭಾರತದ ಶರ್ಮದಾ ಬಾಲು ಎದುರು; ಜರ್ಮನಿಯ ಲೀನಾ ಪಾಪಡಕಿಸ್ 6-2, 7-5 ರಿಂದ ಭಾರತದ ವೈಷ್ಣವಿ ಅಡ್ಕರ್ ಎದುರು; ಥಾಯ್ಲೆಂಡ್‌ನ ಥಾಸಪೋರ್ನ್ ನಕ್ಲೊ 6–2, 6–0 ಯಿಂದ ಭಾರತದ ಪಾವನಿ ಪಾಠಕ್‌ ಎದುರು; ಜೆಕ್ ಗಣರಾಜ್ಯದ ಅನ್ನಾ ಸಿಸ್ಕೋವಾ 6-2, 6-1 ರಿಂದ ಭಾರತದ ಹುಮೇರಾ ಬಹರ್ಮಸ್ ಎದುರು ಜಯ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT