ಪ್ಯಾರಿಸ್: ಅಮೆರಿಕದ ಜಿಮ್ನಾಸ್ಟಿಕ್ಸ್ ತಾರೆ ಸಿಮೊನ್ ಬೈಲ್ಸ್ ಶನಿವಾರ ಒಲಿಂಪಿಕ್ಸ್‌ನ ಮಹಿಳೆಯರ ವಾಲ್ಟ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಇದರೊಂದಿಗೆ ಅವರು ಒಲಿಂಪಿಕ್ಸ್‌ನಲ್ಲಿ ಏಳನೇ ಮತ್ತು ಪ್ಯಾರಿಸ್‌ನಲ್ಲಿ ಮೂರನೇ ಚಿನ್ನ ಜಯಿಸಿದರು.
ವಾಲ್ಟ್ ಸ್ಪರ್ಧೆಯಲ್ಲಿ ಬೆರಗುಗೊಳಿ ಸುವ ಕಸರತ್ತು ನಡೆಸಿದ ಅವರು 15.300 ಪಾಯಿಂಟ್ಸ್‌ಗಳೊಂದಿಗೆ ಹ್ಯಾಟ್ರಿಕ್ ಚಿನ್ನಕ್ಕೆ ಕೊರಳೊಡ್ಡಿದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಮತ್ತು ಹಾಲಿ ವಿಶ್ವ ಚಾಂಪಿಯನ್ ಬ್ರೆಜಿಲ್‌ನ ರೆಬೆಕಾ ಆಂಡ್ರೇಡ್ (14.966) ಬೆಳ್ಳಿ ಗೆದ್ದರೆ, ಅಮೆರಿಕದ ಜೇಡ್ ಕ್ಯಾರಿ (14.466) ಕಂಚು ತಮ್ಮದಾಗಿಸಿಕೊಂಡರು.
27 ವರ್ಷ ವಯಸ್ಸಿನ ಬೈಲ್ಸ್ ಕೆಲ ದಿನಗಳ ಹಿಂದೆ ತಂಡ ವಿಭಾಗದಲ್ಲಿ ಮತ್ತು ಆಲ್‌ರೌಂಡ್ ವಿಭಾಗದಲ್ಲಿ ಸ್ವರ್ಣ ಗೆದ್ದಿದ್ದರು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅವರು ಇನ್ನೂ ಎರಡು ಸ್ಪರ್ಧೆಗಳಲ್ಲಿ ಕಣಕ್ಕಿಳಿಯಲ್ಲಿದ್ದಾರೆ. ಸೋಮವಾರ ನಡೆಯುವ ಫ್ಲೋರ್ ಎಕ್ಸೈಸ್ ಮತ್ತು ಬ್ಯಾಲೆನ್ಸ್ ಭೀಮ್‌ನಲ್ಲಿ ಅವರು ಪದಕ ಜಯಿಸುವ ವಿಶ್ವಾಸದಲ್ಲಿದ್ದಾರೆ.