ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಯಾಫ್‌: ಉನ್ನತಿಗೆ ಚಿನ್ನದ ಪದಕ

Published : 13 ಸೆಪ್ಟೆಂಬರ್ 2024, 21:59 IST
Last Updated : 13 ಸೆಪ್ಟೆಂಬರ್ 2024, 21:59 IST
ಫಾಲೋ ಮಾಡಿ
Comments

ಬೆಂಗಳೂರು: ಕರ್ನಾಟಕದ ಉನ್ನತಿ ಅಯ್ಯಪ್ಪ ಅವರು ಚೆನ್ನೈನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಸ್ಯಾಫ್‌ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಮಹಿಳೆಯರ 200 ಮೀಟರ್‌ ಓಟದಲ್ಲಿ ಚಿನ್ನದ ಪದಕ ಗೆದ್ದರು.

ಭಾರತವನ್ನು ಪ್ರತಿನಿಧಿಸುತ್ತಿರುವ ಫೈನಲ್‌ ಸ್ಪರ್ಧೆಯಲ್ಲಿ ಉನ್ನತಿ 23.91 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಭಾರತದ ನ್ಯಾನ್ಸಿ ಮತ್ತು ನೀರು ಪಾಠಕ್‌ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು. ಉನ್ನತಿ ಅವರು ಮಹಿಳೆಯರ 100 ಮೀಟರ್ ಹರ್ಡಲ್ಸ್‌ ಓಟದಲ್ಲಿ ಕೂಟ ದಾಖಲೆಯೊಂದಿಗೆ ಗುರುವಾರ ಚಿನ್ನ ಗೆದ್ದಿದ್ದರು.

ಮಹಿಳೆಯರ 4x100 ಮೀಟರ್‌ ರಿಲೆ ಸ್ಪರ್ಧೆಯಲ್ಲಿ ಭಾರತದ ನ್ಯಾನ್ಸಿ, ಎನ್. ಕರ್ನೆಲಿಯೊ, ಅಭಿನಯಾ ರಾಜರಾಜನ್‌ ಮತ್ತು ವಿ. ಸುಧೀಕ್ಷಾ ಅವರನ್ನು ಒಳಗೊಂಡ ತಂಡ ಚಿನ್ನ ಗೆದ್ದಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT