ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳೂರಿನಲ್ಲಿ ಕ್ರೀಡಾ ರಸಪ್ರಶ್ನೆ ಆ. 18ರಂದು

Published : 14 ಆಗಸ್ಟ್ 2024, 14:00 IST
Last Updated : 14 ಆಗಸ್ಟ್ 2024, 14:00 IST
ಫಾಲೋ ಮಾಡಿ
Comments

ಮಂಗಳೂರು: ನಗರದ ಮಂಗಳೂರು ಕ್ವಿಜಿಂಗ್ ಫೌಂಡೇಷನ್ (ಎಂಕ್ಯುಎಫ್‌) ಆಯೋಜಿಸಿರುವ ಕ್ರೀಡಾ ರಸಪ್ರಶ್ನೆ ಸ್ಪರ್ಧೆ ಇದೇ 18ರಂದು ಬೆಂದೂರ್‌ವೆಲ್‌ನಲ್ಲಿರುವ ಸೇಂಟ್ ಆ್ಯಗ್ನೆಸ್ ಶತಮಾನೋತ್ಸವ ಕಟ್ಟಡದ ಸಭಾಂಗಣದಲ್ಲಿ ನಡೆಯಲಿದೆ.

ಎಥೆಲ್ ಫೌಂಢೇಷನ್ ಹಾಗೂ ವಿನಯಾ ಆಸ್ಪತ್ರೆ–ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ನಡೆಯುವ ರಸಪ್ರಶ್ನೆಯಲ್ಲಿ ಶಾಲಾ ವಿಭಾಗ ಮತ್ತು ಮುಕ್ತ ವಿಭಾಗ ಇದ್ದು ಇಬ್ಬರನ್ನು ಒಳಗೊಂಡ ತಂಡಗಳು ಪಾಲ್ಗೊಳ್ಳಬಹುದಾಗಿದೆ ಎಂದು ಎಂಕ್ಯುಎಫ್‌ನ ಅಧ್ಯಕ್ಷ ಡಾ.ಅಣ್ಣಪ್ಪ ಕಾಮತ್ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ಶಾಲಾ ವಿದ್ಯಾರ್ಥಿಗಳ ಸ್ಪರ್ಧೆ ಬೆಳಿಗ್ಗೆ 10 ಗಂಟೆಯಿಂದ ಮತ್ತು ಮುಕ್ತ ವಿಭಾಗದ ಸ್ಪರ್ಧೆ ಮಧ್ಯಾಹ್ನ 2 ಗಂಟೆಯಿಂದ ನಡೆಯಲಿದೆ. ಪ್ರಾಥಮಿಕ ಸುತ್ತು ಲಿಖಿತವಾಗಿರುತ್ತದೆ. ಫೈನಲ್‌ಗೆ ಆರು ತಂಡಗಳಿಗೆ ಪ್ರವೇಶ ಸಿಗಲಿದೆ. ಫೈನಲ್‌ನಲ್ಲಿ ಐಡೆಂಟಿಟಿ ಕ್ರೈಸಿಸ್, ಆಲ್ ಇನ್ ದಿ ಫ್ಯಾಮಿಲಿ, ಫೈನಲ್ ಕೌಂಟ್‌ಡೌನ್ ಮುಂತಾದ ಸುತ್ತುಗಳು ಇರುತ್ತವೆ ಎಂದು ಅವರು ತಿಳಿಸಿದರು.

ಪ್ರವೇಶ ಉಚಿತವಾಗಿದ್ದು ಮುಕ್ತ ವಿಭಾಗದಲ್ಲಿ ಅಗ್ರ ಮೂರು ತಂಡಗಳಿಗೆ ಕ್ರಮವಾಗಿ ₹ 25 ಸಾವಿರ, ₹ 15 ಸಾವಿರ ಮತ್ತು ₹ 10 ಸಾವಿರ ನಗದು, ಶಾಲಾ ವಿಭಾಗದಲ್ಲಿ ಕ್ರಮವಾಗಿ ₹ 15 ಸಾವಿರ, ₹ 10 ಸಾವಿರ ಮತ್ತು ₹ 5 ಸಾವಿರ ಮೊತ್ತದ ವಸ್ತುಗಳನ್ನು ನೀಡಲಾಗುವುದು. ಪ್ರತಿ ವಿಭಾಗದಲ್ಲಿ ವಿಜೇತರಿಗೆ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳು ಸಿಗಲಿವೆ. ಶಾಲಾ ವಿಭಾಗದಲ್ಲಿ ಪ್ರೇಕ್ಷಕರಿಗೂ ಬಹುಮಾನಗಳೂ ಸಿಗಲಿವೆ ಎಂದು ಅವರು ತಿಳಿಸಿದರು.

ನೋಂದಣಿ ಕಡ್ಡಾಯವಾಗಿದ್ದು 9902096914 ಅಥವಾ 7019944161 ಇಲ್ಲವೇ 94408050413 ಸಂಖ್ಯೆಗಳಿಗೆ ವಾಟ್ಸ್‌ ಆ್ಯಪ್ ಮಾಡಿ ನೊಂದಾಯಿಸಿಕೊಳ್ಳಬಹುದು ಎಂದು ವಿವರಿಸಿದರು. ವಿಶ್ವಾಸ್ ಕೆ.ಪೈ, ನಂದಕಿಶೋರ್ ಮತ್ತು ವಿಕಾಸ್ ಜೈನ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT