ಬೆಂಗಳೂರು: ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ (ಕೆಎಎ) ಮತ್ತು ಕೋಲಾರ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಆಯೋಜಿಸಿರುವ ರಾಜ್ಯ 55ನೇ ಕ್ರಾಸ್ ಕಂಟ್ರಿ ಚಾಂಪಿಯನ್ಷಿಪ್ ಇದೇ 31ರಂದು ಕೋಲಾರದಲ್ಲಿ ನಡೆಯಲಿದೆ. ಚಂಡೀಗಢದಲ್ಲಿ ಫೆಬ್ರುವರಿ 21ರಂದು ನಡೆಯಲಿರುವ ರಾಷ್ಟ್ರೀಯ ಕ್ರಾಸ್ ಕಂಟ್ರಿ ಚಾಂಪಿಯನ್ಷಿಪ್ಗೆ ರಾಜ್ಯದ ಕ್ರೀಡಾಪಟುಗಳ ಆಯ್ಕೆಯೂ ಈ ಸ್ಪರ್ಧೆಯ ಸಂದರ್ಭದಲ್ಲಿ ನಡೆಯಲಿದೆ.

16 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರಿಗಾಗಿ ಎರಡು ಕಿಲೋಮೀಟರ್, 18 ವರ್ಷದೊಳಗಿನ ಬಾಲಕರಿಗೆ ಆರು ಕಿಲೋಮೀಟರ್ ಮತ್ತು ಬಾಲಕಿಯರಿಗೆ ನಾಲ್ಕು ಕಿಲೋಮೀಟರ್, ಜೂನಿಯರ್ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ (20 ವರ್ಷದೊಳಗಿನವರು) ಪುರುಷರಿಗೆ ಎಂಟು ಕಿಲೋಮೀಟರ್ ಮತ್ತು ಮಹಿಳೆಯರಿಗೆ ಆರು ಕಿಲೋಮೀಟರ್, ಸೀನಿಯರ್ ಪುರುಷ–ಮಹಿಳೆಯರಿಗಾಗಿ 10 ಕಿಲೋಮೀಟರ್ಸ್ ಸ್ಪರ್ಧೆ ನಡೆಯಲಿದೆ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಜಿಲ್ಲಾ ಸಂಸ್ಥೆ, ಕ್ಲಬ್ಗಳ ಅಥ್ಲೀಟ್ಗಳು ಪಾಲ್ಗೊಳ್ಳಬಹುದಾಗಿದೆ ಎಂದು ಕೆಎಎ ಗೌರವ ಕಾರ್ಯದರ್ಶಿ ಎ.ರಾಜವೇಲು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.