ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಮಟ್ಟದ ಅಥ್ಲೆಟಿಕ್ಸ್ ಪಂದ್ಯಾವಳಿ: ಬೆಳಗಾವಿ ತಂಡಕ್ಕೆ 2 ಚಿನ್ನ, 3 ಬೆಳ್ಳಿ

Published 28 ನವೆಂಬರ್ 2023, 20:51 IST
Last Updated 28 ನವೆಂಬರ್ 2023, 20:51 IST
ಅಕ್ಷರ ಗಾತ್ರ

ಧಾರವಾಡ: ನಗರದಲ್ಲಿ ಮಂಗಳವಾರ ನಡೆದ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿನಿಯರ ರಾಜ್ಯಮಟ್ಟದ ಅಥ್ಲೆಟಿಕ್ಸ್‌ ಪಂದ್ಯಾವಳಿಯಲ್ಲಿ ಬೆಳಗಾವಿ ತಂಡ 5 ಪದಕ (ಚಿನ್ನ:2 , ಬೆಳ್ಳಿ:3), 24 ಪಾಯಿಂಟ್ಸ್‌ ಗಳಿಸಿ ಸಾಧನೆ ಮಾಡಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ತಂಡಗಳು ತಲಾ 6 ಪದಕ, ಕ್ರಮವಾಗಿ 19 ಹಾಗೂ 14 ಪಾಯಿಂಟ್ಸ್‌ ಪಡೆದಿವೆ. 

ಶಾಲಾ ಶಿಕ್ಷಣ (ಪದವಿಪೂರ್ವ) ಇಲಾಖೆ, ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ, ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ವತಿಯಿಂದಆರ್‌.ಎನ್‌.ಶೆಟ್ಟಿ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಅಥ್ಲೆಟಿಕ್ಸ್‌ ಪಂದ್ಯಾವಳಿಯ ವಿವಿಧ ಸ್ಪರ್ಧೆಗಳ ಫಲಿತಾಂಶ ಇಂತಿದೆ.

ಓಟ; 100 ಮೀ: ಸ್ತುತಿ ಪಿ.ಶೆಟ್ಟಿ (ಉಡುಪಿ)-1 , ವೈಭವಿ ಬುದ್ರುಕ್‌ (ಬೆಳಗಾವಿ)-2, ಪ್ರಿಯಾ ಕೆ (ಬೆಂಗಳೂರು ಉತ್ತರ)-3.

400 ಮೀ: ರಿತುಶ್ರೀ (ದಕ್ಷಿಣ ಕನ್ನಡ)-1, ಅಭಿಜ್ಞಾ (ಶಿವಮೊಗ್ಗ)-2 ಹಾಗೂ ಅರ್ಣಿಕಾ ವರ್ಷಾ ಡಿಸೋಜಾ-3

800 ಮೀ: ಪ್ರಿಯಾಂಕಾ ಓಲೆಕಾರ (ಧಾರವಾಡ)-1, ಶಿಲ್ಪಾ ಹೊಸಮನಿ (ಧಾರವಾಡ)-2, ಚೈತ್ರಾ ಟಿ.ಪಿ (ದಕ್ಷಿಣ ಕನ್ನಡ)-3

3,000 ಮೀ: ಶ್ರೀರಕ್ಷಾ (ಬೆಂಗಳೂರು ಉತ್ತರ)-1, ಪ್ರಣತಿ (ಬೆಂಗಳೂರು ಉತ್ತರ)-2, ಮಹಾಲಕ್ಷ್ಮಿ ಬಸಕಾಲಿ (ಬಾಗಲಕೋಟೆ)-3.

ಹರ್ಡಲ್ಸ್‌ (100 ಮೀ): ಅಪೂರ್ವ ನಾಯಕ್‌ (ಬೆಳಗಾವಿ)-1, ಇಶಾ ಎಲಿಜಬತ್‌ (ಬೆಂಗಳೂರು ದಕ್ಷಿಣ)-2, ಗೌರಂಗಿ ಗೌಡ (ಶಿವಮೊಗ್ಗ)-3.

ಡಿಸ್ಕಸ್‌ ಥ್ರೋ: ಮಾಧುರ್ಯ (ಉಡುಪಿ)-1, ಐಶ್ವರ್ಯಾ ಮಾರುತಿ ಬೆಂಡಿಗೇರಿ (ದಕ್ಷಿಣ ಕನ್ನಡ)-2, ದೇವಿಕಾ ರಾವ್‌ (ಉಡುಪಿ)-3.

ಹೈ ಜಂಪ್‌: ಗೌತಮಿ ಗೌಡ (ಶಿವಮೊಗ್ಗ)-1, ಅಮೃತಾ ಕೆ (ದಕ್ಷಿಣ ಕನ್ನಡ)-2, ಸುದೀಕ್ಷಾ ಕಾಮತ್‌ (ಉಡುಪಿ)-3.

ಲಾಂಗ್‌ ಜಂಪ್‌: ಲಕ್ಷಾ (ಮೈಸೂರು)-1, ಸ್ಮಿತಾ ಆರ್‌. ಕಾಕತ್ಕರ್‌ (ಬೆಳಗಾವಿ)-2, ನಿತ್ಯಶ್ರೀ (ಬೆಂಗಳೂರು ಗ್ರಾಮಾಂತರ)-3.

ಶಾಟ್‌ಪಟ್‌: ಐಶ್ವರ್ಯಾ ಮಾರುತಿ ಬೆಂಡಿಗೇರಿ (ದಕ್ಷಿಣ ಕನ್ನಡ)-1, ಶಿಫಾ ಎಸ್‌.ತಹಶೀಲ್ದಾರ್‌ (ಬೆಳಗಾವಿ)-2, ಮಾಧುರ್ಯ (ಉಡುಪಿ)-3.

4X100 ಮೀಟರ್‌ ರಿಲೆ: ಬೆಳಗಾವಿ ತಂಡ (ವೈಭವಿ ಬುದ್ರುಕ್‌, ಅಪೂರ್ವ ನಾಯಕ್‌, ಅದಿತಿ ಗಡಕರಿ, ಸ್ಮಿತಾ ಆರ್‌.ಕಾಕತ್ಕರ್‌)-1, ಬೆಂಗಳೂರು ಉತ್ತರ ತಂಡ (ಪ್ರಿಯಾ ಕೆ, ರಕ್ಷಿತಾ ಕಂದಾಚಾರಿ, ದೀಕ್ಷಾ ಡಿ., ಮಾನ್ಯಾ)-2, ದಕ್ಷಿಣ ಕನ್ನಡ ತಂಡ (ಜೊಬಿನಾ ಜಾಯ್‌, ರೀತುಶ್ರೀ, ಅನಘಾ ಕೆ.ಎ, ರೇಖಾ)-3, ಉಡುಪಿ ತಂಡ ( ಸ್ತುತಿ ಪಿ. ಶೆಟ್ಟಿ, ಅಕ್ಷತಾ ಎಲ್‌, ಸವಿತಾ ಎಂ, ದಾನಮ್ಮ ಆರ್‌.ಪೂಜಾರಿ)4.

ಹೈಜಂಪ್‌ನಲ್ಲಿ ಪ್ರಥಮ ಸ್ಥಾನ ಪಡೆದ ಗೌತಮಿ ಗೌಡ ಜಿಗಿತ ಪರಿ
ಪ್ರಜಾವಾಣಿ ಚಿತ್ರ/ಬಿ.ಎಂ.ಕೇದಾರನಾಥ 
ಹೈಜಂಪ್‌ನಲ್ಲಿ ಪ್ರಥಮ ಸ್ಥಾನ ಪಡೆದ ಗೌತಮಿ ಗೌಡ ಜಿಗಿತ ಪರಿ ಪ್ರಜಾವಾಣಿ ಚಿತ್ರ/ಬಿ.ಎಂ.ಕೇದಾರನಾಥ 
400 ಮೀಟರ್‌ ಓಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ರೀತುಶ್ರೀ
ಬಿ.ಎಂ.ಕೇದಾರನಾಥ ಪ್ರಜಾವಾಣಿ ಚಿತ್ರ
400 ಮೀಟರ್‌ ಓಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ರೀತುಶ್ರೀ ಬಿ.ಎಂ.ಕೇದಾರನಾಥ ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT