ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಸ್ಕೆಟ್‌ಬಾಲ್: ನೈರುತ್ಯ ರೈಲ್ವೆಗೆ ಮಾತೃ ಕಪ್

Published 8 ಮಾರ್ಚ್ 2024, 13:05 IST
Last Updated 8 ಮಾರ್ಚ್ 2024, 13:05 IST
ಅಕ್ಷರ ಗಾತ್ರ

ಬೆಂಗಳೂರು:  ಶ್ರುತಿ ಮತ್ತು ಸತ್ಯ ಅವರ ಅಮೋಘ ಆಟದ ಬಲದಿಂದ ನೈರುತ್ಯ ರೈಲ್ವೆ ತಂಡವು ಶುಕ್ರವಾರ ಮುಕ್ತಾಯವಾದ ಮಾತೃ ಕಪ್–ಏಳನೇ ರಾಜ್ಯಮಟ್ಟದ ಎಸ್‌.ಎಂ.ಎನ್. ಸ್ಮಾರಕ ಮಹಿಳಾ ಬ್ಯಾಸ್ಕೆಟ್‌ಬಾಲ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್‌ಷಿಪ್ ಗೆದ್ದುಕೊಂಡಿತು. 

ಶ್ರೀ ಕಂಠೀರವ ಕ್ರೀಡಾಂಗಣದ ಒಳಾಂಗಣ ಕೋರ್ಟ್‌ನಲ್ಲಿ ನಡೆದ ಟೂರ್ನಿಯ ಫೈನಲ್‌ ಲೀಗ್‌ ಸುತ್ತಿನಲ್ಲಿ ರೈಲ್ವೆ ತಂಡವು 78–39ರಿಂದ ಮೌಂಟ್ಸ್ ಕ್ಲಬ್ ವಿರುದ್ಧ ಜಯಿಸಿತು. ರೈಲ್ವೆ ತಂಡದ ಶ್ರುತಿ (28) ಮತ್ತು ಸತ್ಯ (17) ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೌಂಟ್ಸ್‌ ಕ್ಲಬ್‌ ತಂಡದ ನಿಹಾರಿಕಾ (15) ಮತ್ತು ಜಾಹ್ನವಿ (8) ಉತ್ತಮವಾಗಿ ಆಡಿದರು. ಪಂದ್ಯದ ಅರ್ಧವಿರಾಮದ ವೇಳೆಗೆ ರೈಲ್ವೆ ತಂಡವು 40–27ರ ಮುನ್ನಡೆ ಸಾಧಿಸಿತ್ತು. 

ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಬೀಗಲ್ಸ್ ಬ್ಯಾಸ್ಕೆಟ್‌ಬಾಲ್ ಕ್ಲಬ್‌ 63–47 ರಿಂದ ಬೆಂಗಳೂರು ವ್ಯಾನ್‌ಗಾರ್ಡ್ಸ್‌ ವಿರುದ್ಧ ಜಯಿಸಿತು. ಬೀಗಲ್ಸ್‌ನ ತಿಶಾ (19) ಮತ್ತು ಪ್ರಿಯಾಂಕಾ (11) ಉತ್ತಮವಾಗಿ ಆಡಿದರು.  

ವಿಜೇತ ತಂಡಕ್ಕೆ ₹ 60 ಸಾವಿರ, ರನ್ನರ್ಸ್ ಅಪ್ ತಂಡಕ್ಕೆ ₹ 40 ಸಾವಿರ, ಮೂರನೇ ಸ್ಥಾನದ ತಂಡದ ₹ 20 ಸಾವಿರ ಹಾಗೂ ನಾಲ್ಕನೇ ಸ್ಥಾನದ ತಂಡಕ್ಕೆ ₹ 10 ಸಾವಿರ ನೀಡಲಾಯಿತು.  

ಮೌಂಟ್ಸ್ ಕ್ಲಬ್ ತಂಡದ ನಿಲಯಾ ರೆಡ್ಡಿ ಅವರು ಉದಯೋನ್ಮುಖ ಆಟಗಾರ್ತಿ ಮತ್ತು ಬೀಗಲ್ಸ್‌ನ ಚಂದನಾ ಶ್ರೇಷ್ಠ ಆಟಗಾರ್ತಿ ಗೌರವಕ್ಕೆ ಪಾತ್ರರಾದರು. 

ವಿಜೇತರಿಗೆ ಕನ್ನಡ ಸಿನಿಮಾ ತಾರೆಗಳಾದ ಪ್ರೇಮ್, ಜ್ಯೋತಿ ಪ್ರೇಮ್ ಮತ್ತು ಅಮೃತಾ ಪ್ರೇಮ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಫಿಬಾ ಏಷ್ಯಾ ಅಧ್ಯಕ್ಷ ಕೆ. ಗೋವಿಂದರಾಜ್ ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT